ರಕ್ಷಾ ಬಂಧನಕ್ಕೆ ಶೌಚಾಲಯ ಉಡುಗೊರೆ ನೀಡಿದ ಸಹೋದರರು

0
29
loading...

ರಕ್ಷಾ ಬಂಧನಕ್ಕೆ ಶೌಚಾಲಯ ಉಡುಗೊರೆ ನೀಡಿದ ಸಹೋದರರು

ಕನ್ನಡಮ್ಮ ಸುದ್ದಿ-ಬೆಳಗಾವಿ:ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ಅಡಿಯಲ್ಲಿ ರವಿವಾರ ಸಹೊದರರು ತಮ್ಮ ಸಹೋದರಿಯರಿಗೆ ಶೌಚಾಲಯವನ್ನು ಉಡೊಗೊರೆ ನೀಡುವ ಮೂಲಕ ರಕ್ಷಾಬಂಧನ ಅರ್ಥಪೂರ್ಣವಾಗಿ ಆಚರಿಸಿದರು.

ಅ.೨ ರೊಳಗೆ ಜಿಲ್ಲೆಯನ್ನು ಬಯಲು ಬಹಿರ್ದೆಶೆ ಮುಕ್ತ ಮಾಡಲು ಹಲವು ವಿನೂತನ ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತ ಹಮ್ಮಿಕೊಂಡಿದ್ದು, ಅದರಲ್ಲಿ ಇದು ಒಂದಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್.ಆರ್ ಅವರು ತಿಳಿಸಿದ್ದಾರೆ.

ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಹೊದರರು, ಸಹೊದರಿಯರಿಗೆ ಶೌಚಾಲಯ ಊಡೂಗೊರೆ ನೀಡಲು ಪ್ರೆರೆಪಿಸಲಾಗಿದೆ. ಜಿಲ್ಲೆಯಾದ್ಯಂತ ಇಂದು ೨೪೦೦ ಕ್ಕಿಂತ ಹೆಚ್ಚು ಶೌಚಾಲಯ ನಿರ್ಮಾಣ ಮಾಡಿರುವುದು ಖುಷಿ ತಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...