ರಕ್ಷಾ ಬಂಧನದ ಪ್ರಯುಕ್ತ ಸಚಿವರಿಗೆ ಸನ್ಮಾನ

0
6
loading...

ರಕ್ಷಾ ಬಂಧನದ ಪ್ರಯುಕ್ತ ಸಚಿವರಿಗೆ ಸನ್ಮಾನ

ಕನ್ನಡಮ್ಮ ಸುದ್ದಿ-ಗೋಕಾಕ: ನಗರದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದ ಮುಖ್ಯಸ್ಥೆ ಬ್ರಹ್ಮಕುಮಾರಿ ಮೀರಾ ಅಕ್ಕನವರು ಶನಿವಾರದಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರಿಗೆ ರಕ್ಷಾ ಬಂಧನದ ಪ್ರಯುಕ್ತ ರಾಖಿ ಕಟ್ಟಿ ಸನ್ಮಾನಿಸಿದರು.
ನಂತರ ಸಚಿವ ರಮೇಶ ಜಾರಕಿಹೊಳಿ ಅವರು ಮಾತನಾಡಿ ಸಹೋದರ ಸಹೋದರಿಯರ ಪವಿತ್ರ ಪ್ರಿÃತಿಯ ಬಂಧನ ಈ ರಕ್ಷಾ ಬಂಧನವಾಗಿದೆ. ಅಣ್ಣ ತಂಗಿಯರ ಬಾಂಧವ್ಯ ಬೆಸಗುವ ಸಂಕೇತವಾಗಿದ್ದು ಜನುಮ ಜನುಮಗಳ ಅನುಬಂಧವಾಗಿದೆ ಎಂದರಲ್ಲದೇ ಎಲ್ಲ ಸಹೋದರಿಯರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಶಂಕರರಾವ ಜಾಧವ, ಬಿ.ಕೆ.ಹೆಗಡೆ, ಕರಿಕಟ್ಟಿ, ಗುಡ್ಡಾಕಯು, ವಿ.ಕೆ.ಸುನಿತಾ, ಉಂದ್ರಿ, ಗಂಗಾಧರ ಸೇರಿದಂತೆ ಇತರರು ಇದ್ದರು.

loading...