ರಸ್ತೆಯ ತುಂಬೆಲ್ಲಾ ನೀರು, ವಾಹನ ಸಂಚಾರರಿಗೆ ತೂಂದರೆ

0
0
loading...

ಕನ್ನಡಮ್ಮ ಸುದ್ಧಿ-ರೋಣ: ಪಟ್ಟಣದ ಮುಲ್ಲನಭಾವಿ ವೃತ್ತದಲ್ಲಿ ರಸ್ತೆಯ ತುಂಬೆಲ್ಲಾ ನೀರು ಸಂಗ್ರಹಗೊಂಡು ವಾಹನ ಸಂಚಾರರಿಗೆ, ಪಾದಚಾರಿಗಳಿಗೆ ತೊಂದರೆಯುಂಟಾಗಿದೆ. ಸಂಬಂಧಿಸಿದ ಪುರಸಭೆಯ ಅಧಿಕಾರಿಗಳು ವ್ಯವಸ್ಥೆಯ ಅವಲೋಕನಕ್ಕೂ ಮುಂದಾಗದೇ ನಿಶ್ಚಲ ಸ್ಥಿತಿಯಲ್ಲಿರುವಂತೆ ಕಾಣುತ್ತಲಿದೆ.
ಮುಲ್ಲನಭಾವಿ ವೃತ್ತದಲ್ಲಿ ಪೈಪ್‌ಲೈನ್‌ ಒಡೆದು ನಿರಂತರ ನೀರು ಹರಿಯುತ್ತಲಿದ್ದು, ರಸ್ತೆಯಲ್ಲಿ ನೀರು ಸಂಗ್ರಹಗೊಂಡು ಪಾದಚಾರಿಗಳಿಗೆ ಹಾಗೂ ವಾಹನ ಸವಾರರು ಹರಸಾಹಸವನ್ನೆ ಪಡಬೇಕಾದ ಸ್ಥಿತಿಯು ನಿರ್ಮಾಣಗೊಂಡಿದ್ದರೂ ಕೂಡಾ ಅಧಿಕಾರಿಗಳ ಗಮನವಿಲ್ಲಾ. ಇದು ಪುರಸಭೆಯ ವ್ಯಾಪ್ತಿಗೆ ಒಳಪಡುವದಾಗಿದ್ದರೂ ಕೂಡಾ ಗಮನವಿಲ್ಲಾ.
ಚುನಾವಣೆಯ ಕಾವು: ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯತೆಯು ಪ್ರಮುಖವಾಗಿ ಪುರಸಭೆಯ ಚುನಾವಣೆಯ ಕಾವು ಪಟ್ಟಣದ ಸ್ಥಿತಿಯನ್ನು ಅವಲೋಕಿಸದ ಹಾಗೇ ಮಾಡುತ್ತಲಿದೆ. ಪಟ್ಟಣದ ಸ್ವಚ್ಛತೆಯು ಹಾಳಾಗುತ್ತಲಿದೆ.
ತಗ್ಗುದಿನ್ನಿಗಳ ಮಹಾಪೂರ: ಇಂದು ಮುಲ್ಲನಭಾವಿ ರಸ್ತೆಯಲ್ಲಿ ತಗ್ಗುದಿನ್ನಿಗಳಿಂದ ಕೂಡಿದ್ದು,ಸಹಜವಾಗಿ ಪೈಪ್‌ ಒಡೆಯಿತೆಂದರೇ ಗುಂಡಿಗಳಲ್ಲಿ ನೀರು ಸಂಗ್ರಹಗೊಂಡು ಸಾರ್ವಜನಿಕರು ತೊಂದರೆಗಿಡಾಗುವಂತೆ ಮಾಡಿದೆ.
ವಾಹನ ಸವಾರರಿಗೆ ತೊಂದರೆ:ಈ ರಸ್ತೆಯು ಪ್ರಮುಖವಾಗಿ ಗಜೇಂದ್ರಗಡ, ಬದಾಮಿ, ಬಾಗಲಕೋಟ ಮುಂತಾದ ಪಟ್ಟಣಗಳಿಗೆ ಮಾರ್ಗವಾಗಿದ್ದು, ಇಂದಿನ ಸ್ಥಿತಿಯಿಂದ ಬಸ್‌ ಚಾಲಕರು, ಬೈಕ್‌ ಸವಾರರು ಪರದಾಡುತ್ತಲಿದ್ದಾರೆ.
ಅಫಘಾತ: ಈ ರಸ್ತೆಯಲ್ಲಿ ಸಂಗ್ರಹಗೊಂಡಿರುವ ನೀರಿನಿಂದಾಗಿ ಬೈಕ್‌ ಸವಾರರು ಯಾವಕಡೆಗಳಲ್ಲಿ ಸಂಚರಿಸಬೇಕೆ ಎಂಬ ದೃಷ್ಠಿಯ ಗೊಂದಲದಿಂದ ಸ್ಥಳದಲ್ಲಿಯೇ ಬಿದ್ದಿದುಂಟು.ಈ ವಿಷಯವನ್ನು ಸವಾರರು ತಮ್ಮ ಸಮಸ್ಯೆಯನ್ನು ವ್ಯಕ್ತಪಡಿಸಿದರು.
ಪರಿಹರಿಸಿ: ಎಲ್ಲಡೆಯು ನೀರು ಸಂಗ್ರಹಗೊಂಡಿದ್ದರ ಪರಿಣಾಮದಿಂದಾಗಿ ಅಲ್ಲಿನ ವ್ಯಾಪಾರಸ್ಥರು ತೊಂದರೆಯನ್ನು ಅನುಭವಿಸುತ್ತಲಿದ್ದಾರೆ.ವ್ಯಾಪಾರವಹಿವಾಟಿಗೆ ಕತ್ತರಿಬಿಂತಾಗಿದೆ.ಮೊದಲು ಪರಿಹರಿಸಿ ಎನ್ನುತ್ತಾರೆ ಮುಲ್ಲನಭಾವಿ ವೃತ್ತದ ವ್ಯಾಪಾರಸ್ಥರು.
ಗುಂಡಿಗಳನ್ನು ಮುಚ್ಚಿಸಿ: ಪ್ರಮುಖವಾಗಿ ಅಲ್ಲಿನ ತಗ್ಗುಗುಂಡಿಗಳನ್ನು ಲೋಕೋಪಯೋಗಿ ಇಲಾಖೆಯು ಗಮನಹರಿಸಿ,ಸುಧಾರಿಸುವಲ್ಲಿ ಶ್ರಮಿಸಿ ಅಂದಾಗಿ ನೀರಿನ ಸಂಗ್ರಹಕ್ಕೆ ತಡೆಯುವಂತಾಗುತ್ತದೆ ಎನ್ನುತ್ತಾರೆ ವೃತ್ತದ ಅಂಗಡಿಗಳ ಮಾಲೀಕರು.
=======ಬಾಕ್ಸ========
ಇದಕ್ಕೂ ಪೂರ್ವದಲ್ಲಿ ಪೈಪ್‌ ಲೈನ್‌ ಒಡೆದು ಹೋಗಿತ್ತು,ಅದನ್ನು ಪರಿಹರಿಸಲಾಗಿತ್ತು.ಆದರೆ ರಸ್ತೆಯಲ್ಲಿ ವಾಹನ ದಟ್ಟಣೆಯಿಂದಾಗಿ ಒಡೆದುಹೋಗಿದ್ದು ಸಂಭವಿಸಿದೆ.ಭಾರಿ ವಾಹನಗಳ ದಟ್ಟಣೆಯಿಂದಾಗಿ ಒಡೆದು ನೀರು ಸಂಗ್ರಹಗೊಂಡಿದೆ.ಇದನ್ನು ಕೂಡಲೇ ಪರಿಹರಿಸಲಾಗುವುದು.
——-ಲಕ್ಷ್ಮಣ ಕಟ್ಟಿಮನಿ.ಪುಸಭೆ ಮುಖ್ಯಾಧಿಕಾರಿ ರೋಣ.
=======ಬಾಕ್ಸ=======
ಅಲ್ಲಿನ ಗುಂಡಿಗಳನ್ನು ಮುಚ್ಚಿಸುವ ಕಾರ್ಯವನ್ನು ಕೈಗೊಳ್ಳುತ್ತಲಿದ್ದು ಮುಖ್ಯ ರಸ್ತೆಯಲ್ಲಿರುವ(ಹೈವೆ)ತಗ್ಗುಗಳನ್ನು ಮುಚ್ಚಿಸುವ ಕಾರ್ಯವನ್ನು ಮಾಡಲಾಗುತ್ತಲಿದೆ.
——-ಕೆ.ವ್ಹಿ.ಹದ್ಲಿ.ಲೋಕೋಪಯೋಗಿ ಇಲಾಖೆ ರೋಣ.

loading...