ರಸ್ತೆ ಮಧ್ಯದಲ್ಲಿ ಗುಂಡಿ: ಜೀವ ಭಯದಲ್ಲಿ ವಾಹನ ಸವಾರರು

0
4
loading...

ಬಸವನಬಾಗೇವಾಡಿ: ತಾಲೂಕಿನ ನರಸಲಗಿ ಗ್ರಾಮದಿಂದ ಬಸವನಬಾಗೇವಾಡಿ ಮುದ್ದೆÃಬಿಹಾಳ ಮುಖ್ಯರಸ್ತೆಗೆ ಹೋಗುವ ರಸ್ತೆಯ ಮಧ್ಯದಲ್ಲಿ ಗುಂಡಿಗಳು ಹೆಚ್ಚಾಗಿದ್ದು ನಿತ್ಯ ಸಂಚಾರಿಸುವ ಬೈಕ್, ವಾಹನ ಸವಾರರು ಜೀವಭಯದ ಮಧ್ಯದಲ್ಲಿ ಅಲೆದಾಡುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ.
ಹೌದು ಇದು ಬೀಳಗಿ-ಬಾರಖೇಡ ರಸ್ತೆಯಿಂದ ನರಸಲಗಿ ಗ್ರಾಮದಿಂದ ಅಂಬಳನೂರ, ಕೊಡಗಾನೂರ ಹಾಲಿಹಾಳ ಗ್ರಾಮಗಳಿಗೆ ಹೋಗುವ ರಸ್ತೆ ಮಧ್ಯೆದಲ್ಲಿ ಗುಂಡಿಗಳು ತೆರದು ವರ್ಷಗಳೆ ಗತಿಸಿದರು ಯಾವ ಅಧಿಕಾರಿಗಳು ಗಮನ ಹರಿಸದೇ ಇರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ರಸ್ತೆ ಮಾರ್ಗವಾಗಿ ಬಸವನಬಾಗೇವಾಡಿ ಪಟ್ಟಣಕ್ಕೆ ಕಾಲೇಜು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ, ಹೆಣ್ಣುಮಕ್ಕಳು, ಗರ್ಭಿಣಿಯರು, ವಯೋವೃದ್ಧರು, ಕೂಲಿಕಾರ್ಮಿಕರು, ವ್ಯಾಪಾರಕ್ಕಾಗಿ, ಆಸ್ಪತ್ರೆಗಳಿಗೆ ಹೋಗುವ ರಸ್ತೆಯಿಂದಾಗಿದ್ದು, ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಗ್ರಾಮದ ರೈತರು ತೋಟ-ಹೊಲಗಳಿಗೆ ಹೋಗುತ್ತಾರೆ, ವಿದ್ಯಾರ್ಥಿಗಳು ಈ ರಸ್ತೆ ಮಾರ್ಗವಾಗಿ ಹಾಸ್ಟೆÃಲಗೆ ತೆರಳುತ್ತಾರೆ ಸಾವಿರಾರು ಜನರು ಬೈಕ್, ವಾಹನಗಳ ಮುಖಾಂತರ ಪಟ್ಟಣಕ್ಕೆ ಹಾಗೂ ಬೇರೆ ಊರುಗಳಿಗೆ ತೆರಳುವ ಸಂದರ್ಭದಲ್ಲಿ ಜನರು ಅಪಘಾತಕ್ಕೆ ಈಡಾಗೀ ಗಾಯ ಮಾಡಿಕೊಂಡಿರುವ ಘಟನೆಗಳು ಸಾಕಷ್ಟು ಇವೆ ಗ್ರಾಮಸ್ಥರು ಅಧಿಕಾರಿಗಳ ವಿರೋಧ ದಿನ ನಿತ್ಯ ಹಿಡಿಶಾಪ ಹಾಕುತ್ತಿರುವುದು ಸರ್ವೆÃ ಸಾಮಾನ್ಯವಾಗಿದೆ, ಇದನ್ನೆಲ್ಲ ಅರಿತ ಅಧಿಕಾರಿಗಳು ಜಾಣಕುರುಡರಂತೆ ವರ್ತಸುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದೆ. ರಸ್ತೆಯಲ್ಲಿ ಅಪಘಾತ ಸಂಭವಿಸುವ ಮುಂಚೆ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ಥೆ ಮಾಡಲು ಮುಂದಾಗುತ್ತಾರೆ ಕಾದು ನೋಡಬೇಕಾಗಿದೆ.

loading...