ರಾಜೀವ್ ಗಾಂಧಿ ಸಾಮೂಹಿಕ ಹಿಂಸಾಚಾರದ ಪಿತಾಮಹ

0
9
loading...

ನವದೆಹಲಿ:ದೆಹಲಿ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರ ಟ್ವಿಟರ್ ಖಾತೆಯ ಪೋಸ್ಟ್ ಒಂದು ಭಾರೀ ಸುದ್ದಿ ಮಾಡುತ್ತಿದೆ. ಸದ್ಯ ಈ ಟ್ವೀಟ್ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ತಜಿಂದರ್ ಟ್ವೀಟ್ ಮಾಡಿರುವ ಫೋಟೋದಲ್ಲಿ ಒಂದು ಫ್ಲೆಕ್ಸ್ ಇದ್ದು,ಅದರಲ್ಲಿ ರಾಜೀವ್ ಗಾಂಧಿ ಫೋಟೋ ಇದೆ.ಜೊತೆಗೆ `ರಾಜೀವ್ ಗಾಂಧಿ:ಸಾಮೂಹಿಕ ಹಿಂಸಾಚಾರದ ಪಿತಾಮಹ’ಎಂದು ಇಂಗ್ಲಿಷ್‍ನಲ್ಲಿ ಬರೆಯಲಾಗಿದೆ.
ಅಸಲಿಗೆ ಇದು 1984ರಲ್ಲಿ ಜರ್ಮನಿಯಲ್ಲಿ ನಡೆದ ಸಿಖ್ ಗಲಭೆಗೆ ಸಂಬಂಧಿಸಿದ್ದು ಎನ್ನಲಾಗಿದೆ.ಸಿಖ್ ಗಲಭೆಯ ಕುರಿತಾಗಿ ಇತ್ತೀಚೆಗೆ ಲಂಡನ್‍ನಲ್ಲಿ ರಾಹುಲ್ ಗಾಂಧಿ ಹೇಳಿಕೆಯೊಂದನ್ನು ನೀಡಿದ್ದರು.ಈ ಭೇಟಿ ವೇಳೆ ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದ್ದರು.ಜೊತೆಗೆ ಈ ಗಲಭೆಯಲ್ಲಿ ಕಾಂಗ್ರೆಸ್‍ನ ಪಾತ್ರ ಇಲ್ಲ ಎಂದು ಹೇಳಿಕೆ ನೀಡಿದ್ದರು.

loading...