ರಾಷ್ಟ್ರಭಾಷೆಯ ಜೊತೆಯಲ್ಲಿಯೇ ಉತ್ತಮ ಸಂಸ್ಕಾರ ಬೆಳೆಸುವುದು ಶಿಕ್ಷಕರ ಕರ್ತವ್ಯ: ಬಿಇಓ ಬಿಂಗೇರಿ

0
72
loading...

ಕನ್ನಡಮ್ಮ ಸುದ್ದಿ-ಇಂಡಿ: ರಾಷ್ಟ್ರಭಾಷೆ ಹಿಂದಿಯನ್ನು ಮಕ್ಕಳಿಗೆ ಆಸಕ್ತಿಯನ್ನು ಬರುವ ಹಾಗೇ ಮಾಡುವುದರ ಜೊತೆಯಲ್ಲಿಯೇ ಅದನ್ನು ಪ್ರೀತಿಸಿ ಮತ್ತು ಗೌರವಿಸಿರಿ ಎಂದು ಅದನ್ನು ಆಸಕ್ತಿಯಿಂದ ಕಲಿಯಲು ಪ್ರೇರೆಪಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಬಿಂಗೇರಿ ಅವರು ಹೇಳಿದರು.
ಅವರು ಪಟ್ಟಣದ ಎಸ್. ಆರ್. ಪಾಟೀಲ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ 2018-19 ನೇ ಸಾಲಿನ ಎಸ್ಸೆಸ್ಸಲ್ಸಿ ಸುಧಾರಣಾ ಸಲುವಾಗಿ ಹಿಂದಿ ವಿಷಯ ಕಾರ್ಯಗಾರವನ್ನು ಚಾಲನೆ ನೀಡಿ ಮಾತನಾಡಿದರು.

ವಿದೇಶದಲ್ಲಿ ಹಿಂದಿ ಭಾಷೆಯನ್ನು ಕಲಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಮ್ಮಲ್ಲಿರುವ ಮಕ್ಕಳಲ್ಲಿ ವ್ಯಾಕರಣ ಬದ್ದವಾಗಿ ಕಲಿಸಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನಿಸಬೇಕು ಹಾಗೂ ಮಾತೃ ಭಾಷೆಯ ಜೊತೆಯಲ್ಲಿಯೇ ಹಿಂದಿ ಭಾಷೆಯನ್ನು ಕಲಿಸಿರಿ ಆದರೆ ಈ ಭಾಷೆಯು ಬಹಳ ಸುಂದರ-ಸರಳವಾಗಿದ್ದು ಇದನ್ನು ಅನ್ಯ ಭಾಷೆಯಿಂದ ಸುಂದರವಾಗಿದೆ ಆದ್ದರಿಂದ ಮಕ್ಕಳಲ್ಲಿ ಆಸಕ್ತಿ ತೋರಿಸಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆದರೆ ಎಸ್ಸೆಸ್ಸಲ್ಸಿಯಲ್ಲಿ ಮಕ್ಕಳು ಶೇ.100 ರಷ್ಟು ಅಂಕಗಳನ್ನು ಪಡೆಯಬೇಕು. ಇದರಿಂದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕ್ಷೇತ್ರ ಸಮನ್ವಾಧಿಕಾರಿ ಸಿ.ಎಂ ಬಂಡಗಾರ ಮಾತನಾಡಿ ದೇಶದಲ್ಲಿ ಈ ಭಾಷೆ ರಾಷ್ಟ್ರಭಾಷೆಯಾಗಿದೆ ಆದರೆ ಈ ಭಾಷೆಯನ್ನು ದೇಶದ ಮೊದಲ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಶ್ವ ಸಂಸ್ಥೆಯಲ್ಲಿ ಹಿಂದಿ ಭಾಷೆಯನ್ನು ಮಾತನಾಡಿದ ಮೊದಲ ಪ್ರಧಾನಿಯಾಗಿದ್ದಾರೆ. ಅಂತಹ ಭಾಷೆಯು ಸುಂದರವಾಗಿದೆ ಅಲ್ಲದೇ ದೇಶದ ಯಾವುದೇ ರಾಜ್ಯಗಳಿಗೆ ಹೋದರೆ ಈ ಭಾಷೆಯನ್ನು ಮಾತನಾಡಿದರೆ ಯಾವ ಪ್ರದೇಶದಲ್ಲಿ ನಾವು ಬದುಕುವುದು ಸಾಧ್ಯವಾಗುವುದು ಇದು ಒಂದು ಸಂಪರ್ಕ ಭಾಷೆಯಾಗಿದೆ ಮತ್ತು ಶಿಕ್ಷಕರು ಮಕ್ಕಳಲ್ಲಿ ಹಿಂದಿ ಭಾಷೆಯನ್ನು ಹೆಚ್ಚು ಆಶಕ್ತಿಯಿಂದ ಓದುವ ಹವ್ಯಾಸ ನಿರ್ಮಾಣ ಮಾಡಬೇಕು ಮತ್ತು ಎಸ್‍ಸ್ಸಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ತಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆಯನ್ನುವನ್ನು ಇಂಡಿ ತಾಲೂಕಾ ಪ್ರೌಢಶಾಲೆಗಳ ಹಿಂದಿ ವಿಷಯ ವೇದಿಕೆಯ ಅಧ್ಯಕ್ಷ ಡಿ.ಬಿ.ಧನಶೆಟ್ಟಿ ವಹಿಸಿದ್ದರು. ಉಪಾಧ್ಯಕ್ಷೆ ವಿ.ಪಿ. ನಿರೋಣಿ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನಯ ಮುಖ್ಯೋಪಾಧ್ಯಾಯ ಎಂ.ಪಿ ಬಿರಾದಾರ ಮಾತನಾಡಿ ಮಕ್ಕಳಲ್ಲಿ ಹಿಂದಿ ಭಾಷೆಯನ್ನು ಸರಳತೆಯ ಬಗ್ಗೆ ಹೇಳಿದರು.
ಮುಂಜಾನೆಯ ಅವಧಿಗೆ ತಾಂಬಾ ಸರಕಾರಿ ಪ್ರೌಢಶಾಲೆಯ ಜಿ.ಎಸ್. ಬಂದಿ ಅವರು ಪಠ್ಯ ಪುಸ್ತಕದಲ್ಲಿ ಬರುವ ತುಳಸಿ ಕೆ ದೋಹೆ ಬಗ್ಗೆ ಕವಿ ಪರಿಚಯ ಜೊತೆಗೆ ಆ ಕವಿತೆಯ ಭಾವಾರ್ಥ ಹಾಗೂ ಕವಿತೆಯನ್ನು ಹಾಡಿ ತೋರಿಸಿದರು. ನಂತರ ಮುಂದಿನ ಅವಧಿಯಲ್ಲಿ ಬ್ರೀಲಿಂಟ್ ಪ್ರೌಢ ಶಾಲೆಯ ಹಿಂದಿ ಶಿಕ್ಷಕರಾದ ಎ.ಎನ್. ಪಟೇಲ ಅವರು ವ್ಯಾಕಾರಣ ಅಂಶಗಳು ಸವಿಸ್ತಾರವಾಗಿ ಹೇಳಿದರು. ಅದರಲ್ಲಿ ಬರುವ ಕಠಿಣತೆಯ ಕುರುತು ಸರಳತೆಯ ಬಗ್ಗೆ ಹೇಳಿದರು, ಮಧ್ಯಹ್ನ ಅವಧಿಯಲ್ಲಿ ಬಿಇಓ ಸಾಹೇಬರು ಹಿಂದಿ ವಿಷಯದ ಬಗ್ಗೆ ಅದರ ಮೌಲ್ಯಗಳ ಕುರುತು ಮಾಹಿತಿಯನ್ನು ನೀಡಿದರು.

ಹಿರಿಯ ಶಿಕ್ಷಕರಾದ ಡಿ.ಜಿ. ನಾರಾಯಣಕರ, ಎಸ್.ಎನ್ ಭೈರಗೊಂಡ, ವೈ ಎಸ್. ಆದಗೊಂಡ, ಆರ್.ಎಂ ಪಾಟೀಲ ಹಾಗೂ ಶಿಕ್ಷಕರಾದ ಡಿ.ಎ. ಉಸ್ತಾದ, ಎ.ಎಚ್. ದೇವರಮನಿ, ಎಂ.ಎಚ್. ಮಕಾನದಾರ, ಎಸ್.ಆರ್. ಪೋಳ, ಎಸ್.ಐ. ಕಾರಬಾರಿ, ಎಸ್.ಜಿ.ನಾರಾಯಣಕರ, ಪಿ.ಎಂ. ಅಂಗಡಿ, ಎ.ಎಂ.ದೇವರಮನಿ, ವೈ.ಎಸ್.ಉಪಾಸೆ, ಜೆ.ಎಸ್.ಜೋತಗೊಂಡ, ಆರ್.ಎಂ.ಪಾಟೀಲ, ಎ.ಆಯ್. ನಾಗರರ್ಚಿ, ಆರ್.ಎಂ.ದೇಶಪಾಂಡೆ, ಜಿ.ಎಸ್. ಬಂಡಿ, ಎ.ಎನ್. ಪಟೇಲ, ಪಿ.ಎನ್. ಆಲಮೇಲ, ಸುರೇಶ ಕುರಗೋಡ, ಪಿ.ಎಲ್. ಕುಂದರಗಿ, ಸೋಮು ವಡವಡಗಿ, ಎ,ಬಿ. ಬಿರಾದಾಎ, ಎಚ್.ಎಚ್. ಮಕಾದಾರ, ಎಸ್.ಬಿ.ಕುಂಬಾರ, ಎಸ್.ಐ. ಇನಾಮದಾರ, ಆರ್.ಎ. ಶೇಖ, ಎಂ.ಎಂ. ನಾಲತವಾಡ, ಎ.ಎಲ್. ಸೈಯದ, ಡಿ.ಎಂ.ನಾರಾಯಣಕರ, ಪಿ.ಎಂ. ಬಳಗಾರ, ಪಿ.ಎಸ್.ಬೋಗಾರ, ಟಿ.ಎಚ್. ನಾಗೂರ, ಎಸ್.ಬಿ. ಸಂಖ,ಎಸ್.ಎಸ್. ಸೈದಾಪೂರ, ಎಸ್.ಎನ್. ಮೋಮಿನ, ಎಂ.ಎಂ ನಾಲತವಾಡ ಸೇರಿದಂತೆ ಮತ್ತಿತರು ಇದ್ದರು
ಈ ಕಾರ್ಯಕ್ರಮದ ಮೊದಲಿಗೆ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ನಿಧನ ಹಿನ್ನಲೇಯಲ್ಲಿ ಮೌನಾಚರಣೆ ಆಚರಿಸಿ ಶ್ರದ್ಧಾಂಜಲಿ ಅರ್ಪಣೆ ಮಾಡಿದರು. ಸಂಗೀತ ಶಿಕ್ಷಕಿ ಎಸ್.ಎಂ.ತಳವಾರ ಅವರು ಮೊದಲಿಗೆ ಪ್ರಾರ್ಥನಾ ಹಾಗೂ ಸ್ವಾಗತ ಗೀತೆಯನ್ನು ವಿದ್ಯಾರ್ಥಿಯರ ಜೊತೆಯಲ್ಲಿ ಹಾಡಿದರು. ಶಿಕ್ಷಕರಾದ ಎ.ಎಚ್. ದೇವರಮನಿ, ಸ್ವಾಗತಿಸಿ, ನಿರೂಪಿಸಿದರು. ಪಿ.ಆರ್. ಚೌಹಾಣ ವಂದಿಸಿದರು.

loading...