ರೆಡ್‌ಕ್ರಾಸ್ ಸಂಸ್ಥೆ ಬಲಪಡಿಸಿ: ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ

0
4
loading...

ವಿಜಯಪುರ: ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆಯ ಹಿನ್ನಲೆಯಲ್ಲಿ ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ರಕ್ತದಾನ ಶಿಬಿರಗಳನ್ನು ಹೆಚ್ಚು ಹೆಚ್ಚಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.
ನಗರದ ಸೋಲಾಪುರ ರಸ್ತೆಯಲ್ಲಿರುವ ಬಿಎಲ್‌ಡಿಇಎ ಸಂಸ್ಥೆಯ ಹೊಸ ಕ್ಯಾಂಪಸ್‌ನ ಎಎಸ್‌ಪಿ ಕಾರ್ಮರ್ಸ್ ಕಾಲೇಜ್ ಸಭಾಂಗಣದಲ್ಲಿಂದು ರೆಡ್‌ಕ್ರಾಸ್ ಸಂಸ್ಥೆಯ ೨೦೧೭-೧೮ನೇ ಸಾಲಿನ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೆಡ್‌ಕ್ರಾಸ್ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೆÃಶ ಹೊಂದಲಾಗಿದೆ. ಈ ಹಿನ್ನಲೆಯಲ್ಲಿ ಈ ಸಂಸ್ಥೆಗೆ ಸರ್ಕಾರಿ ನೌಕರರನ್ನು ಕಡ್ಡಾಯವಾಗಿ ಸದಸ್ಯರನ್ನಾಗಿ ಮಾಡುವ ಉದ್ದೆÃಶ ಸಹ ಹೊಂದಲಾಗಿದ್ದು, ಮುಂಬರುವ ದಿನಗಳಲ್ಲಿ ಈ ಕುರಿತಂತೆ ಸೂಕ್ತ ಆದೇಶವನ್ನು ಸಹ ಹೊರಡಿಸಲಾಗುವುದೆಂದು ತಿಳಿಸಿದರು.

ಅದರಂತೆ ರೆಡ್‌ಕ್ರಾಸ್ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸುವ ಜೊತೆಗೆ ಸಾಮಾಜಿಕ ಸೇವೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವ ಉದ್ದೆÃಶ ಹೊಂದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ರಕ್ತದ ಕೊರತೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಘಟಕದ ವತಿಯಿಂದ ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ರಕ್ತದಾನ ಶಿಬಿರಗಳನ್ನು ನಿರಂತರ ಹಮ್ಮಿಕೊಳ್ಳಬೇಕು. ಆರೋಗ್ಯವಂತ ಯುವಜನಾಂಗ ಹಾಗೂ ಸಾರ್ವಜನಿಕರನ್ನು ರಕ್ತದಾನ ಮಾಡಲು ಪ್ರೊÃತ್ಸಾಹಿಸುವುದು, ಅದರಂತೆ ರಕ್ತದಾನದಿಂದ ಆಗುವ ಲಾಭಗಳ ಬಗ್ಗೆಯೂ ಸೂಕ್ತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದ ಅವರು, ಶಾಲಾ-ಕಾಲೇಜ್‌ಗಳಲ್ಲಿ ಈ ಸಂಸ್ಥೆಯ ಚಟುವಟಿಕೆಗಳು ಪರಿಣಾಮಕಾರಿಯಾಗಿ ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಇಂದಿನ ಸಭೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆಗೆ ಮಲ್ಲಿಕಾರ್ಜುನ ಗುರುಬಸಪ್ಪ ರೂಢಗಿ (ಲ್ಯಾಂಡ್ ಡೆವಲರ‍್ಸ್) ಇವರು ೨೫ ಲಕ್ಷ ರೂ. ಚಿಕ್ಕಮಕ್ಕಳ ತಜ್ಞರಾದ ಎಲ್.ಎಚ್.ಬಿದರಿ ೫ ಲಕ್ಷ ರೂ., ಸೋಮನಾಥ್ ಜೇವೂರ ೧ಲಕ್ಷ ರೂ., ಹಿರಿಯ ವೈದ್ಯರಾದ ಡಾ.ಎಚ್.ಕರಿಗೌಡರ ೧ಲಕ್ಷ ರೂ., ನಂದಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯಿಂದ ೧ಲಕ್ಷ ರೂ. ದೇಣಿಗೆ ನೀಡಿದ್ದು, ಈ ಕುರಿತ ಚೆಕ್‌ನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು. ಇದೇ ಸಂದರ್ಭದಲ್ಲಿ ರಕ್ತದಾನಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಸಭೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಪ್ರೆಸಿಡೆಂಟ್ ಎಲ್.ಎಚ್.ಬಿದರಿ, ವೈಸ್ ಚೇರಮನ್ ಶರದ ರೂಢಗಿ, ಕಾರ್ಯದರ್ಶಿ ಮುರಾಳ ಉಪಸ್ಥಿತರಿದ್ದರು. ಎಎಸ್‌ಪಿ ಕಾಲೇಜ್ ಪ್ರಾಚಾರ್ಯ ಸೇರಿದಂತೆ ರೆಡ್‌ಕ್ರಾಸ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

loading...