ರೆಸಾರ್ಟ್ ರದ್ದುಗೊಳ್ಳಿಸಲು ಕರವೇ ಆಗ್ರಹ

0
8
loading...

ಬಸವನಬಾಗೇವಾಡಿ: ಸರಕಾರದ ನೀತಿಯಿಂದ ಅರಣ್ಯ ಹಾಗೂ ಜೀವ ಸಂಕುಲ ನಾಶವಾಗಿ ರಾಜ್ಯದಲ್ಲಿ ಅತೀವೃಷ್ಠಿ ಹಾಗೂ ಅನಾವೃಷ್ಠಿಯಿಂದ ರಾಜ್ಯದಲ್ಲಿ ಭಯಾನಕ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡರ ಬಣ) ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೊÃಶವ್ಯಕ್ತಪಡಿಸಿದರು.
ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ ಕೊಡಗು, ಮಂಗಳೂರ, ಹಾಸನ ವಿವಿಧೆಡೆ ರಾಜ್ಯ ಸರಕಾರ ನಿರ್ಬಂಧ ಹೇರದ ಕಾರಣದಿಂದ ಅರಣ್ಯ ನಾಶವಾಗಿ ರೆಸಾರ್ಟ್ಗಳು ನಿರ್ಮಾಣವಾಗಿ ಅತೀವೃಷ್ಠಿಯಾದರೇ ಉತ್ತರ ಕರ್ನಾಟಕ ಭಾಗದಲ್ಲಿ ಅರಣ್ಯ ನಾಶವಾಗಿ ಮಳೆಬಾರದೇ ರೈತರು ಕಂಗಾಲಾಗಿದ್ದು ಜನತೆ ಹಿತ ಕಾಪಾಡಬೇಕಾದ ಸರಕಾರವು ಸೂಕ್ತಕ್ರಮಕೈಗೊಳ್ಳದೇ ಇಡೀ ರಾಜ್ಯದ ಜನತೆ ಭಯಾನಕ ವಾತಾವರಣ ಬದುಕು ನಡೆಸುವಂತಾಗಿದೆ ಎಂದು ಆರೋಪಿಸಿದರು.

ಪ್ರತಿಭಟನಾ ರ‍್ಯಾಲಿಯಲ್ಲಿ ಶ್ರಿÃಶೈಲ ಹೆಬ್ಬಾಳ, ಸಂತೋಷ ಕೂಡಗಿ, ಪ್ರಕಾಶ ಗಬ್ಬೂರ, ಚಂದ್ರು ನಿಕ್ಕಂ, ಮಹಾಂತೇಶ ಚಕ್ರವರ್ತಿ, ಅರವಿಂದ ಹೂಗಾರ, ಶಂಕರ ವಡ್ಡರ, ಶರಣಗೌಡ ಪಾಟೀಲ, ಪ್ರದೀಪ ಗೊಳಸಂಗಿ, ಮಹಾದೇವಿ ಯರಝೇರಿ, ಶಾರದಾ ಹೂಗಾರ, ಅಂಬ್ರವ್ವ ಹಡಪದ ಮಹಾದೇವಿ ನಾಟೀಕಾರ, ಶೇಖವ್ವ ಹಿರೇಮಠ, ಹುಸೇನಬಿ ಚಪ್ಪರಬಂದ ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು, ಇದೇ ಸಂದರ್ಭದಲ್ಲಿ ಶಿರಸ್ತೆÃದಾರ ಶ್ರಿÃನಿವಾಸ ಕಲಾಲ ಇವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

loading...