ರೇವಣ್ಣ ಬೆಂಬಲಿಗರಿಗೆ ಬಿಸಿ ಮುಟ್ಟಿಸಿದ ಈಶ್ವರಪ್ಪ..!

0
5
loading...

ಬೆಂಗಳೂರು:ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ,ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣರನ್ನು ಭೇಟಿಯಾಗಲು ಹೋಗಿ ಸಚಿವರ ಇಲ್ಲದ ಕಾರಣ ವಾಪಸ್ಸಾಗಿದ್ದು,ಇದೇ ವೇಳೆ ಮೆಗಾ ಹೈಡ್ರಾಮಾ ನಡೆದಿದೆ.
ಸಚಿವ ಹೆಚ್.ಡಿ.ರೇವಣ್ಣರನ್ನ ಭೇಟಿ ಮಾಡಲು ವಿಧಾನಸೌಧದ ಕೊಠಡಿಗೆ ಹೋಗಿದ್ದ ಶಾಸಕ ಕೆ.ಎಸ್.ಈಶ್ವರಪ್ಪ,ಹೆಚ್.ಡಿ.ರೇವಣ್ಣ ಇಲ್ಲದ ಕಾರಣ ವಾಪಸ್ ಬಂದರು.ಬಳಿಕ ಮಾಧ್ಯಮದವರ ಜತೆ ಮಾತನಾಡುವಾಗ ಹೆಚ್.ಡಿ ರೇವಣ್ಣ ಬೆಂಬಲಿಗರು ತಗಾದೆ ಎತ್ತಿದ್ದಾರೆ.
ಮೈತ್ರಿ ಸರ್ಕಾರದ ವಿರುದ್ಧ ಮಾಧ್ಯಮದ ಮುಂದೆ ಈಶ್ವರಪ್ಪ ಹೇಳಿಕೆ ನೀಡುವ ವೇಳೆ ಜೆಡಿಎಸ್ ಸರ್ಕಾರ ಏಕೆ ಟೀಕೆ ಮಾಡ್ತಿರಾ ಎಂದು ಹೆಚ್.ಡಿ ರೇವಣ್ಣ ಬೆಂಬಲಿಗರು ಕಿಡಿಕಾರಿದ್ದಾರೆ.ಈ ವೇಳೆ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದು, ಕುಡಿದಿದ್ದೀಯಾ ಮುಚ್ಕೊಂಡು ಇರು ಎಂದು ರೇವಣ್ಣರ ಬೆಂಬಲಿಗರಿಗೆ ಬಿಸಿ ಮುಟ್ಟಿಸಿ ಅಲ್ಲಿಂದ ತೆರಳಿದ್ದಾರೆ.

loading...