ರೈತರ, ಬಡ ಕೂಲಿಕಾರ್ಮಿಕರ ಸಮಸ್ಯೆಗಳಿಗೆ ಸ್ಪಂಧಿಸಿ : ಸಚಿವ ದೇಶಪಾಂಡೆ

0
6

ಬಾಗಲಕೋಟೆ: ಜಿಲ್ಲೆಯ ಎಲ್ಲ ರೈತರ, ಬಡ, ಕೂಲಿ ಕಾರ್ಮಿಕರ ಅಹವಾಲುಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ಕ್ರಿÃಯಾಶೀಲರಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಂತೆ ಕಂದಾಯ ಮತ್ತು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವರಾದ ಆರ್.ವಿ.ದೇಶಪಾಂಡೆ ಕರೆ ನೀಡಿದರು.
ಗುರುವಾರ ಬಾದಾಮಿ ತಾಲೂಕಿನ ಅಗಸನಕೊಪ್ಪ ಗ್ರಾಮ ಮತ್ತು ಕೆರೂರ ಪಟ್ಟಣ ವ್ಯಾಪ್ತಿಯ ಕೆಲ ಕೃಷಿ ಜಮೀನುಗಳಲ್ಲಿ ಬೆಳೆ ಪರಿಸ್ಥಿತಿ ಪರಿಶೀಲಿಸಿ ನಂತರ ಅಧಿಕಾರಿಗಳ ಜೊತೆ ಮಳೆ ವಿವರ, ಕೃಷಿ ಬಿತ್ತನೆ, ಗೊಬ್ಬರ ದಾಸ್ತಾನು, ಬೆಳೆ ವಿಮೆ, ಕುಡಿಯುವ ನೀರು, ಉದ್ಯೊÃಗ ಖಾತ್ರಿ ಹಾಗೂ ಇನ್ನಿÃತರ ವಿಷಯಗಳ ಬಗ್ಗೆ ಚರ್ಚಿಸಿದರು.

ಜಿಲ್ಲೆಯಲ್ಲಿ ಬೃಹತ್ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ವಿವಿಧ ಕಾಲುವೆಗಳ ಕೊನೆ ಹಂತಕ್ಕೆ ನೀರು ತಲುಪುವ ಕ್ರಮಕೈಗೊಳ್ಳುವಂತೆ ಸಚಿವರು ಕರೆ ನೀಡಿದರು. ಅಗತ್ಯವಿದ್ದಲ್ಲಿ ಐದಾರು ಕೋಟಿಯ ಕ್ರಿÃಯಾಯೋಜನೆಗಳಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಮಂಜೂರಾತಿಗೆ ಕ್ರಮಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಕೆಬಿಜೆಎನ್‌ಎಲ್ ಇಇ ಸಭೆಗೆ ಹಾಜರಾಗದಿದ್ದಕ್ಕೆ ಅವರ ಬಗ್ಗೆ ಕ್ರಮಕೈಗೊಳ್ಳುವಂತೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಒಟ್ಟು ೨.೨೮ ಲಕ್ಷ ಹೆಕ್ಟೆÃರ್ ನೀರಾವರಿ ಪ್ರದೇಶವಿದ್ದು, ಜಿ.ಆರ್.ಬಿ.ಸಿ ಯಿಂದ ನೀರು ಕೊನೆ ಹಂತದ ರೈತರಿಗೆ ತಲುಪಿಸುತ್ತಿಲ್ಲ. ಈ ಕುರಿತು ಅಧಿಕಾರಿಗಳು ಇತ್ತಿÃಚೆಗೆ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಬೆಂಬಲ ಬೆಲೆ ಯೋಜನೆಯಡಿ ಹೆಸರು, ಶೇಂಗಾ, ಗೋವಿನ ಜೋಳಕ್ಕೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆ ನೀಡುಲಾಗುತ್ತಿದ್ದು ಈ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಿ ಮಾರುಕಟ್ಟೆ ಏರಿಕೆಗೆ ಕ್ರಮಕೈಗೊಳ್ಳುವಂತೆ ಸಚಿವರು ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದರು. ಹೆಸರು ಬೆಂಬಲ ಬೆಲೆ ೬೯೭೫ ರೂ. ಇದ್ದು ಮಾರುಕಟ್ಟೆಯಲ್ಲಿ ೫೫೭೫, ಶೇಂಗಾ ಬೆಂಬಲ ಬೆಲೆ ೪೮೯೫ ರೂ. ಇದ್ದು ಮಾರುಕಟ್ಟೆ ದರ ೪೪೫೦, ಗೋವಿಮನ ಜೋಳ ಬೆಂಬಲ ಬೆಲೆ ೧೭೦೦ ರೂ. ಇದ್ದು, ಮಾರುಕಟ್ಟೆ ದರ ೧೪೨೫ ರೂ. ಇದೆ. ಜಿಲ್ಲೆಯಲ್ಲಿ ೧೩೧೬೨ ಮೆ.ಟನ್ ಹೆಸರು ಕಾಳು ಇಳುವರಿ ಸಾಧ್ಯತೆ ಇದ್ದು, ೨೩ ಖರೀದಿ ಕೇಂದ್ರಗಲನ್ನು ತೆರೆಯಲು ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.

ಕುಡಿಯುವ ನೀರು : ಜಿಲ್ಲೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮವಹಿಸಿ ಆರ್‌ಓ ಪ್ಲಾಂಟ್ ಹಾಳಾಗಿದ್ದಲ್ಲಿ ತಕ್ಷಣ ರಿಪೇರಿ ಕಾರ್ಯ ಕೈಗೊಳ್ಳುವಂತೆ ಕಂದಾಯ ಸಚಿವರು ಸೂಚಿಸಿದರು. ಬರ ಪರಿಹಾರದಡಿ ಜಿಲ್ಲಾಡಳಿತದ ವತಿಯಿಂದ ಕೊಳವೆಬಾವಿ ಕೊರೆಯಿಸಲು ಆಗದಿದ್ದಲ್ಲಿ ಶೀಘ್ರವೇ ಶಾಸಕರ ಅನುದಾನ ಬಿಡುಗಡೆಯಾಗಲಿದ್ದು ನೀರಿನ ಸಮಸ್ಯೆಯಾಗುವಲ್ಲಿ ಶಾಸಕರ ಅನುದಾನದಲ್ಲಿ ಕೊಳವೆಬಾವಿ ಕೊರೆಯಿಸಬಹುದೆಂದು ಸಲಹೆ ನೀಡಿದರು.

ಜಿಲ್ಲೆಯ ಎಲ್ಲ ನೀರು ಸರಬರಾಜು ಯೋಜನೆಗಳ ಬಗ್ಗೆ ತಿಂಗಳಿಗೊಮ್ಮೆ ಪರಿಶೀಲನೆ ನಡೆಸುವಂತೆ ಸಚಿವರು ತಿಳಿಸಿದರು. ಸಭೆಯಲ್ಲಿ ಬೆಳಗಾವಿ ಪ್ರಾದೇಶಿ ಆಯುಕ್ತರಾದ ಪಿ.ಎ.ಮೇಘಣ್ಣವರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಕೃಷಿ ಜಂಟಿ ನಿರ್ದೇಶಕ ಪಿ.ರಮೇಶಕುಮಾರ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...