ಲಕ್ಷ್ಮಣಸಾ ಎಚ್.ಹಾವನೂರಗೆ ಸನ್ಮಾನ

0
4
loading...

ಕನ್ನಡಮ್ಮ ಸುದ್ದಿ-ಗದಗ: ಗದುಗಿನ ಹಿರಿಯ ಮೆಕ್ಯಾನಿಕಲ್ ಹಾಗೂ ನಾಟಿ ವೈದ್ಯ ಲಕ್ಷ್ಮಣಸಾ ಎಚ್.ಹಾವನೂರ ಅವರಿಗೆ ಸನ್ಮಾನ ಮಾಡುವ ಮೂಲಕ ಗದಗ-ಬೆಟಗೇರಿ ಟೂ ವ್ಹೀಲರ್ಸ ಮೆಕ್ಯಾನಿಕ್ಸ್ ಅಸೋಸಿಯೇಶನ್ ಸ್ವಾತಂತ್ರ್ಯೋತ್ಸವವನ್ನು ಆಚರಿಸಿತು.
ಅಸೋಸಿಯೇಶನ್‍ದ ಅಧ್ಯಕ್ಷ ಶರತ್ ಪತಂಗೆ ಅವರು ಈ ಸಂದರ್ಭದಲ್ಲಿ ಮಾತನಾಡಿ 72 ನೇ ಸ್ವಾತಂತ್ರ್ಯೋತ್ಸವವನ್ನು ಆಗಸ್ಟ 15 ರಂದು ಜನಿಸಿ 72 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಲಕ್ಷ್ಮಣಸಾ ಹಾವನೂರ ಅವರನ್ನು ಸನ್ಮಾನಿಸುವದು ನಮಗೆಲ್ಲ ಹೆಮ್ಮೆ ಎನಿಸುವದು. ಹಿರಿಯ ಮೆಕ್ಯಾನಿಕಲ್ ಆಗಿರುವ ಹಾವನೂರ ಅವರು ಯುವ ಮೆಕ್ಯಾನಿಕಲ್ಸ್‍ಗಳಿಗೆ ಮಾರ್ಗದರ್ಶಿಯಾಗಿದ್ದಾರೆ. ನಾಟಿ ವೈದ್ಯರೂ ಆಗಿರುವ ಇವರು ಇದುವರೆಗೂ ಸಾವಿರಾರು ರೋಗಿಗಳನ್ನು ಗುಣಪಡಿಸಿದ್ದಾರೆ. ತಮ್ಮ ಜನ್ಮ ದಿನದ ನಿಮಿತ್ಯವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಎರ್ಪಡಿಸಿಕೊಂಡು ಬಂದಿರುವದು ಶ್ಲಾಘನೀಯ ಎಂದರು.ಉಪಾಧ್ಯಕ್ಷ ಸುರೇಶ ಅಬ್ಬಿಗೇರಿಮಠ, ಗಣೇಶ ಮಿಟಾಡೆ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಸಂತ ಧೂಳಾ, ಖಜಾಂಚಿ ಅಶೋಕ ಶಿರೂರ, ಗೌರವ ಅಧ್ಯಕ್ಷ ಜಿ.ಎಲ್.ಮಹೀಂದ್ರಕರ, ಗೌರವ ಉಪಾಧ್ಯಕ್ಷ ಕೆ.ಸಿ.ಬಾಕಳೆ, ಜಂಟಿ ಕಾರ್ಯದರ್ಶಿ ಜಿ.ಎಲ್.ಹಾವನೂರ ಸೇರಿದಂತೆ ಹಲವಾರು ಮೆಕ್ಯಾನಿಕಲ್‍ಗಳು ಉಪಸ್ಥಿತರಿದ್ದರು.

loading...