ಲವ-ಕುಶರೇ ಭಾರತದ ಮೊಟ್ಟಮೊದಲ ಗಮಕಿಗಳು- ಹನುಮಂತಪ್ಪ

0
8
loading...

ಕನ್ನಡಮ್ಮ ಸುದ್ದಿ-ಕೊಪ್ಪಳ:ಹಳೆಗನ್ನಡವನ್ನು ಕಾವ್ಯವನ್ನು ರಸವತ್ತಾಗಿ, ಲಯಬದ್ಧವಾಗಿ ವಾಚಿಸುವ ಕಲೆಯೇ ಗಮಕ. ಗಮಕಿಗಳು ಕೇಳುಗರ ಮನಸ್ಸಿನಲ್ಲಿ ನವರಸಗಳನ್ನುಂಟು ಮಾಡುತ್ತಾರೆ. ನಾಡಿನ ಹಿರಿಯ ಕನ್ನಡ ಪಂಡಿತರು ಹಿಂದಿನಿಂದಲೂ ಹಳೆಗನ್ನಡ ಕಾವುವನ್ನು ಗಮಕ ವಾಚನದಿಂದಲೇ ಜನರಿಗೆ ತಲುಪಿಸುವ ಕೆಲಸವನ್ನು ಮಾಡಿದರು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಜಿಲ್ಲೆಯ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪದ ಚನ್ನಬಸವೇಶ್ವರ ಶಾಖಾಮಠದಲ್ಲಿ ಗಮಕ ಕಲಾ ಪರಿಷತ್ತನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳೆಗನ್ನಡವನ್ನು ಜನರಿಗೆ ತಲುಪಿಸುವಲ್ಲಿ ಗಮಕ ಕಲೆ ಬಹಳ ಪ್ರಭಾವಶಾಲಿ ಮಾಧ್ಯಮವಾಗಿದೆ. ವಾಲ್ಮಿÃಕಿ ಮಹರ್ಷಿಯು ಲವ-ಕುಶರಿಗೆ ರಾಮಾಯಣವನ್ನು ಗಮಕ ರೀತಿಯಲ್ಲಿ ವಾಚನ ಮಾಡುವುದನ್ನು ಕಲಿಸಿದರು. ಅವರಿಬ್ಬರೂ ರಾಮನ ಎದುರಿಗೆ ರಾಮಾಯಣವನ್ನು ಗಮಕ ರೀತಿಯಲ್ಲಿ ವಾಚಿಸಿದರು. ಹೀಗಾಗಿ ಲವ-ಕುಶರೇ ಭಾರತದ ಮೊಟ್ಟಮೊದಲ ಗಮಕಿಗಳು. ಇಂದಿನ ದಿನಮಾನಗಲ್ಲಿ ಹಳೆಗನ್ನಡ ಕಾವ್ಯವನ್ನು ರಸವತ್ತಾಗಿ ವಾಚನಮಾಡದಿರುವುದರಿಂದಲೇ ಹಳೆಗನ್ನಡವು ಇಂದಿನ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗುತ್ತಿದೆ ಎಂದರು.

ಭಾಗ್ಯನಗರದ ಹಿರಿಯ ಸಾಹಿತಿಗಳಾದ ಡಿ.ಎಂ.ಬಡಿಗೇರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ನಶಿಸಿ ಹೋಗುತ್ತಿರುವ ಗಮಕ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯು ಮುಂದಿನ ಪೀಳಿಗೆಯ ಮೇಲಿದೆ ಎಂದರು. ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ಫಕೀರಪ್ಪ ವಜ್ರಬಂಡಿ, ಬನ್ನಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಉಮಾದೇವಿ ಮಾಳೆಕೊಪ್ಪ, ತಾ.ಪಂ. ಸದಸ್ಯರಾದ ಗೌರಮ್ಮ ನಾಗನೂರು, ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

loading...