ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಫೈಟ್ ಮೋದಿ ವರ್ಸಸ್ ದೇವೇಗೌಡ

0
11
loading...

ಬೆಂಗಳೂರು:ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಸಸ್ ಹೆಚ್.ಡಿ.ದೇವೇಗೌಡ ಆಗಬಹುದು. ಆ ಶಕ್ತಿ ದೇವೇಗೌಡರ ಬಳಿ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಭವಿಷ್ಯ ನುಡಿದಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್,ಪ್ರಧಾನಿ ಮೋದಿ ಎದುರು ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗಳು ಚರ್ಚೆಗೆ ಕಾರಣವಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿ ಸಿದ ಅವರು,ಹೆಚ್.ಡಿ.ದೇವೇಗೌಡರು ರಾಜಕೀಯ ಮುತ್ಸದ್ಧಿ.ದೇಶದಲ್ಲಿ ಅವರಿಗೆ ಗೌರವವಿದೆ.ಮುಂದಿನ ದಿನಗಳಲ್ಲಿ ಮೋದಿ ವರ್ಸಸ್ ಹೆಚ್.ಡಿ.ದೇವೇಗೌಡರೂ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಪ್ರಧಾನಿಯಾಗಿ ಪದಗ್ರಹಣ ಮಾಡುವಾಗ ದೇಶ-ವಿದೇಶದಿಂದ ಗಣ್ಯಾತಿಗಣ್ಯರನ್ನು ಕರೆಸಿದ್ದರು.ಆ ಸಮಾ ರಂಭಕ್ಕೆ ಖರ್ಚು ವೆಚ್ಚವನ್ನು ಬಿಜೆಪಿ ಭರಿಸಿತ್ತೇ?ಅಥವಾ ಮೋದಿ ತಮ್ಮ ಪಾಕೆಟ್‍ನಿಂದ ಹಾಕಿದ್ದಾರೆಯೇ?ಯಾರ ದುಡ್ಡಿನಿಂದ ಮೋದಿ ಖರ್ಚು ಮಾಡಿದ್ದರು ಎಂಬುವುದಕ್ಕೆ ಯಡಿಯೂರಪ್ಪ, ಈಶ್ವರಪ್ಪ ಲೆಕ್ಕ ಕೊಡುತ್ತಾರಾ ಎಂದು ಪ್ರಶ್ನಿಸಿದರು.
ಹೆಚ್.ಡಿ. ಕುಮಾರಸ್ವಾಮಿ ಪದಗ್ರಹಣ ಲೆಕ್ಕ ಕೇಳುವ ಬಿಜೆಪಿ ಅವರು ಪ್ರಧಾನಿ ಹಾಗೂ ಅವರ ಅಧಿಕಾರ ಸ್ವೀಕರಿಸಿದ ಲೆಕ್ಕ ಕೊಡುತ್ತಾರಾ?ವರ್ಗಾವಣೆ ದಂಧೆ ಮಾತನಾಡುವ ಬಿಜೆಪಿ ಅವರ ಪಕ್ಷ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ, ಸಚಿವರು ಏನು ಮಾಡಿದ್ದಾರೆ ಎಂಬುವುದು ಇಡೀ ದೇಶಕ್ಕೆ ಗೊತ್ತು. ಸರ್ಕಾರದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಬಾರದು ಎಂದು ತಿರುಗೇಟು ನೀಡಿದರು.
ಮುಂದಿನ ಲೋಕಸಭಾ ಚುನಾವಣೆಗೆ ಕೋಮುವಾದ ಹಾಗೂ ಜಾತ್ಯಾತೀತ ಪಕ್ಷಗಳ ನಡುವೆ ಹೋರಾಟ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಮಾತನಾಡಿ ಕಾಲ ಕಳೆದಿದ್ದಾರೆ. ಅವರ ಸರ್ವಾಧಿಕಾರಿ ಧೋರಣೆಗೆ ತಕ್ಕ ಉತ್ತರ ಸಿಗಲಿದೆ ಎಂದರು.

loading...