ವಡ್ಡರಗಾವಿ ಸ್ವಚ್ಛತೆಗೆ ನಿವಾಸಿಗಳ ಆಗ್ರಹ: ಪಾಲಿಕೆ‌ ಎದುರು ಪ್ರತಿಭಟನೆ

0
32
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ನಗರದ ವಡ್ಡರಗಾವಿ ಅಸ್ವಚ್ಛತೆಯಿಂದ ನಿವಾಸಿಗಳು ಚಿಕನ್‌ ಗುನ್ಯಾ.ಡೇಂಗ್ಯೂ ರೋಗಗಳಿಗೆ ತುತ್ತಾಗುತ್ತಿದ್ದು,
ತಕ್ಷಣ ಪಾಲಿಕೆ ಸ್ವಚ್ಛತೆ ಮಾಡಿಕೊಡಬೇಕೆಂದು ಆಗ್ರಹಿಸಿ
ಅಂಬೇಡ್ಕರ್ ಕ್ರಾಂತಿ ಯುವ ವೇದಿಕೆ ವತಿಯಿಂದ
ಪಾಲಿಕೆ ಎದುರು ಇಂದು ಪತ್ರಿಭಟನೆ ನಡೆಸಿದರು.

ಮಹಾನಗರ ಪಾಲಿಕೆ‌ ನಿರ್ಲಕ್ಷ್ಯದಿಂದ ನಗರದಲ್ಲಡೇ ಅಸ್ವಚ್ಛತೆ ನಿರ್ಮಾಣವಾಗಿದೆ.ಅಲ್ಲದೆ‌ ಕೆಲ ವಾರ್ಡಗಳಲ್ಲಿ ಮಲೇರಿಯಾ ಡೆಂಗ್ಯೂ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅದೇ ರೀತಿ ವಡ್ಡರಗಾವಿ ಪ್ರದೇಶದಲ್ಲಿನ ಗಟಾರು, ಕಸ ವಿಲೇವಾರಿ‌ ಮಾಡಸಿರುವುದರಿಂದ ಸೊಳ್ಳೆ‌ಗಳು ಹೆಚ್ಚಾಗಿದ್ದು,ಅಲ್ಲಿನ ನಿವಾಸಿಗಳು ರೋಗಕ್ಕೆ ತುತ್ತಾಗುತ್ತಿದ್ದಾರೆ.ಆದ್ದರಿಂದ‌ ಪಾಲಿಕೆ ಈಗಲಾದರು ಅಲ್ಲಿ ಅಸ್ವಸ್ಥತೆ ಯನ್ನು ಸ್ವಚ್ಛಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ‌ಸಂದರ್ಭದಲ್ಲಿ ಯುವ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ ಎಸ್.ಜಿ, ಸದಸ್ಯರಾದ ಪರಶುರಾಮ ಗಾಡಿವಡ್ಡರ, ಸಂತೋಷ ಪಾತ್ರೂಟ,ರಾಹುಲ್ ಕಾಗಲಕಂ, ರಮೇಶ ಗಾಡಿವಡ್ಡರ ಸೇರಿದಂತೆ ವಡ್ಡರಗಾವಿ ನಿವಾಸಿಗಳು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

loading...