ವರುಣನ ಆರ್ಭಟ; ಜನಜೀವನ ಸಂಪೂರ್ಣ ಅಸ್ತವ್ಯಸ್ಥ ಮಳೆನಾಡದ ಮಲೆನಾಡು

0
10
loading...

ಬೆಂಗಳೂರು:ಮಲೆನಾಡಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಮಳೆಯಿಂದ ಮಲೆನಾಡಿನ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕುದುರೆಮುಖ,ಕಳಸ,ಬಾಳೆಹೊನ್ನೂರು ಚಿಕ್ಕಮಗಳೂರು ಹಾಗೂ ತರೀಕೆರೆಯಲ್ಲಿ ನಾಲ್ಕು ದಿನದಿಂದ ಧಾರಾಕಾರ ಮಳೆ ಸುರಿಯುತ್ತಿದೆ.

ಮಲೆನಾಡಲ್ಲಿ ರಾತ್ರಿ ವೇಳೆಯಲ್ಲೇ ಹೆಚ್ಚು ಮಳೆಯಾಗುತ್ತಿದ್ದು, ಹಗಲಲ್ಲಿ ಬಿಟ್ಟು-ಬಿಟ್ಟು ಸುರಿಯುತ್ತಿದೆ.ಇತ್ತ ಧಾರಾಕಾರ ಮಳೆ ಯಿಂದ ಭದ್ರಾ,ತುಂಗಾ,ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

ಭಾರಿ ಮಳೆಗೆ ರಸ್ತೆಗೆ ಉರುಳಿದ ಬೃಹತ್ ಗಾತ್ರದ ಮರಗಳಿಂದ ಮಲೆನಾಡಿನ ಕೆಲಹಳ್ಳಿಗಳು ವಿದ್ಯುತ್ ಸಂಪರ್ಕ ಕಳೆದು ಕೊಂಡಿದೆ.ಬೃಹತ್ ಗಾತ್ರದ ಮರ ಉರುಳಿದ ಪರಿಣಾಮ ಚಿಕ್ಕಮಗಳೂರು ಮಂಗಳೂರು ಹೆದ್ದಾರಿಯಲ್ಲಿಯೂ ಎರಡು ಗಂಟೆಗೂ ಹೆಚ್ಚುಕಾಲ ಟ್ರಾಫಿಕ್ ಜಾಮ್ ಆಗಿತ್ತು.

loading...