ವಾಜಪೇಯಿ ಅವರಿಗೆ ಶೃದ್ಧಾಂಜಲಿ

0
5
loading...

ಬಾಗಲಕೋಟೆ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನಗರದ ಅಂಭಾಭವಾನಿ ದೇವಾಯಲದ ಸಭಾಭವನದಲ್ಲಿ ಎಸ್ ಎಸ್ ಕೆ ಸಮಾಜ ವತಿಯಿಂದ ಶೃದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ಅಧ್ಯಕ್ಷ ಹಾಗೂ ಸಮಾಜದ ಮುಖಂಡರಾಗಿರುವ ಶರದ್ ಕಲಬುರ್ಗಿ ನೇತೃತ್ವದಲ್ಲಿ ತರುಣ ಸಂಘ ಕಾರ್ಯಕರ್ತರಿಂದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಮುಖಂಡರಾಗಿರುವ ಶರದ್ ಕಲಬುರ್ಗಿ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಅವರನ್ನು ಕಳೆದುಕೊಂಡಿರುವುದಕ್ಕೆ ಈ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲರಿಗೂ ನಾಯಕರಾಗಿ ಅಜಾತಶತ್ರ ಎಂದು ಹೆಸರುವಾಸಿಯಾಗಿದ್ದರು. ಇಂತಹ ನಾಯಕರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಒಂದು ನಿಮಿಷ ಮೌನಾಚರಣೆ ಆಚರಣೆ ಮಾಡುವುದ ಜೊತೆಗೆ ಮೇಣದ ಬತ್ತಿಯನ್ನು ಹಿಡಿದುಕೊಂಡು ಶೃದ್ದಾಂಜಲಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಗಣಪತಿಸಾ ದಾನಿ, ಸಿದ್ದರಾಮಸಾ ದಾನಿ, ಗಂಗಾಧರಸಾ ಕಾಟವಾ, ರಘುನಾಥ ಧೋಂಗಡೆ, ಆನಂದ ಭಾಂಡೆಗೆ, ಆನಂದ ರಂಗ್ರೆÃಜ್ ಸೇರಿದಂತೆ ಮಹಿಳಾ ಸಂಘದ ಪ್ರಮುಖರು, ಸಮಾಜದ ಭಾಂದವರು ಇತರರು ಉಪಸ್ಥಿತಿರಿದ್ದರು.

loading...