ವಾಜಪೇಯಿ ಅವರು ಒಬ್ಬ ಮಹಾನ್ ನಾಯಕ: ಮಲ್ಲು

0
7
loading...

ನಾಲತವಾಡ: ಗುರುವಾರ ನಿಧನ ಹೊಂದಿದ ಸಜ್ಜನ ರಾಜಕಾರಣಿ, ಅಜಾತಶತ್ರು, ಭಾರತ ರತ್ನ ಮಾಜಿ ಪ್ರಧಾನ ಮಂತ್ರಿ ಡಾ.ಅಟಲ್ ಬಿಹಾರಿ ವಾಜಪೇಯಿಯವರಿಗೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶರಕ್ರವಾರ ಅವರ ಅಭಿಮಾನಿ ಬಳಗದಿಂದ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನಾಚರಣೆ ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಯುವ ಮುಖಂಡ ಮಲ್ಲು ಸ್ಥಾವರಮಠ ಮಾತನಾಡಿ ದೇಶದ ಬಹು ಅಪರೂಪ ಮಾಣಿಕ್ಯರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಒಬ್ಬರು, ಅವರ ದೇಶದ ಅಭಿವೃದ್ಧಿಗಾಗಿ ಹಗಲಿರುಳ ದುಡಿದ ಒಬ್ಬ ಶ್ರೆÃಷ್ಠ ರಾಜಕಾರಣಿ, ಇವರು ಎಲ್ಲ ರಾಜಕೀಯ ನಾಯಕ್ರಿಗೆ ಆದರ್ಶ ವ್ಯಕ್ತಿ ತಮ್ಮ ರಾಜಕೀಯ ಜೀವಮಾನದಲ್ಲಿ ಅಜಾತ ಶತ್ರು ಎಂಬ ಬಿರುದು ದೇಶದ ಜನತೆ ಅವರಿಗೆ ನೀಡಿದೆ. ಪ್ರಾಮಾಣಿಕ ಮತ್ತು ಸಜ್ಜನ ರಾಜಕಾರಣಿ ಅವರು ರಾಜಕೀಯ ಜೀವನದಲ್ಲಿ ತಮ್ಮದೆ ಆದ ಇತಿಹಾಸವನ್ನು ಹೊಂದಿದವರು, ಭಾರತ ದೇಶವನ್ನು ರಾಷ್ಟç ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಏರಿಸಿದ ಒಬ್ಬ ಮಹಾನ ನಾಯಕ ಇಂದು ನಮ್ಮನ್ನು ಬಿಟ್ಟು ಅಗರಿವುದು ತುಂಬ ನೂವಿನ ಸಂಗತಿ ಅವರ ರಾಷ್ಟç ಪ್ರೆÃಮ ಹಾಗೂ ಅವರು ನಡೆದು ಬಂದ ದಾರಿ ಎಲ್ಲರಿಗೆ ಮಾದರಿಯಾಗಿದೆ ಎಂದರು.

ಈ ವೇಳೆ ಭಾ.ಜ.ಪಾ ತಾಲೂಕಾ ಎಸ್ಟಿ ಮೊರ್ಚಾ ಪ್ರಧಾನ ಕಾರ್ಯದರ್ಶಿ ಮಾರುತಿ ಗುರಿಕಾರ, ಪ್ರದೀಪ ಪಾಟೀಲ, ವೀರೇಶ ಪಾಟೀಲ, ಗುರುರಾಜ ತಂಗಡಗಿ, ಜಗದೀಶ ಹಡಪದ, ಮಲ್ಲು ಸ್ಥಾವರಮಠ, ಸಿದ್ದು ಅರಸೂರ, ಶರಣಪ್ಪ, ಶಿವು ಜಾವೂರ, ಹಾಗೂ ಇನ್ನು ಅನೇಕರು ಉಪಸ್ಥಿತರಿದ್ದರು.

loading...