ವಾಜಪೇಯಿ ದೇಶದ ಮಹಾನ್ ಚೇತನ

0
3
loading...

ಇಂಡಿ: ಇಂಡಿ ತಾಲೂಕಿನ ನಾದಬಿಕೆ ಗ್ರಾಮz ಗಾಂಧಿ ವೃತ್ತದಲ್ಲಿ ಅಜಾತು ಶತ್ರು ಹಾಗೂ ಅಚ್ಚು ಮೆಚ್ಚಿನ ನಾಯಕ ಮಾಜಿ ಪ್ರಧಾನಿ ಡಾ.ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಹಣಮಂತ್ರಾಯ ಹಳಿಮನಿ ಮಾತನಾಡಿ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ೧೯೯೮-೨೦೦೪ರ ವರೆಗೆ ಪ್ರಧಾನಿಯಾಗಿದ್ದಾಗ ಅವರು ಜನಪರ ಕಾರ್ಯಗಳನ್ನು ಮಾಡಿ ತಮ್ಮದೇಯಾದ ವ್ಯಕ್ತಿತ್ವದಿಂದ ಜನಪ್ರಿÃಯವಾಗಿದ್ದರು ಅಂತಹ ಮಹಾನ ಚೇತನವು ದೇಶಕ್ಕೆ ಹಾಗೂ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಇವರು ತಮ್ಮ ಅವಧಿಯಲ್ಲಿ ಪ್ರೊÃಖಾನು ಅಣು ಪರೀಕ್ಷೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಸರ್ವ ಶಿಕ್ಷಣ ಅಭಿಯಾನ ಇಂತಹ ಉತ್ತಮ ಕಾರ್ಯಕ್ರಮಗಳು ಮಾಡಿದ್ದರು.
ಅಲ್ಲದೇ ವಾಜಪೇಯಿ ಅವರ ದೂರದೃಷ್ಠಿಯ ಫಲವಾಗಿದ್ದು ಎಂದು ತಮ್ಮ ಶೋಕದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ತಾ.ಪಂ ಸದಸ್ಯ ಸಿದ್ದರಾಮ ವಾಲಿಕಾರ, ಬಸವರಾಜ ಅಂಕದ, ಮಕ್ಕನಗೌಡ ಪಾಟೀಲ, ಸೈಯ್ಯದ ದೇಸಾಯಿ, ಪರುಶುರಾಮ ಭಾಸಗಿ, ಮಲಗಲು ಮಾದರ, ಗಂಗಾಧರ ಕಾಂಬಳೆ, ಮಲ್ಲೆಶಪ್ಪಗೌಡ ಪಾಟೀಲ, ಪ್ರಶಾಂತ ಘೋರೆ, ರಾಜಕುಮಾರ ಪಾಟೀಲ, ಶಿವನಗೌಡ ಪಾಟೀಲ, ಚೋಟು ವಾಲಿಕಾರ, ದೇವೆಂದ್ರ ಅಗಸರ, ಸಲಿಂ ವಾಲಿಕಾರ, ರಾಜಕುಮಾರ ಇಂಡಿ, ಸೇರಿದಂತೆ ನೂರಾರು ಜನರು ಸಂತಾಪ ವ್ಯಕ್ತ ಪಡಿಸಿದ್ದಾರೆ.

loading...