ವಾಲ್ಮೀಕಿ ವೃತ್ತ, ಪುತ್ಥಳಿ ಪ್ರತಿಷ್ಠಾಪನೆಗೆ ಆಗ್ರಹ

0
6
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಅಥಣಿ ರಸ್ತೆಯ ಸೋಲಾಪೂರ ರಿಂಗ ರಸ್ತೆಯಲ್ಲಿ ವೃತ್ತಕ್ಕೆ ಆದಿಕವಿ ಮಹರ್ಷಿ ವಾಲ್ಮೀಕಿ ವೃತ್ತವೆಂದು ನಾಮಕರಣ ಮಾಡುವಂತೆ ಹಾಗೂ ಪುಥಳಿಗೆ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಸಮಿತಿ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಧ್ಯಕ್ಷ ರವೀಂದ್ರ ಭಗವಂತಪ್ಪನವರ (ಬಿಸನಾಳ) ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ವಾಲ್ಮೀಕಿ ಸಮಾಜವು ಸುಮಾರು 50 ಸಾವಿರ ಜನಸಂಖ್ಯೆಯನ್ನು ಹೊಂದಿರುತ್ತದೆ. ವಿಜಯಪುರ ನಗರದಲ್ಲಿ ಯಾವುದೇ ಸರ್ಕಲ್‌ಗೆ ಆದಿಕವಿ ಶ್ರೀ ಮಹರ್ಷಿ ಹೆಸರನ್ನು ಇಲ್ಲಿಯವರೆಗೆ ಇಟ್ಟಿರುವುದಿಲ್ಲ. ವಾಲ್ಮೀಕಿ ಸಮಾಜವು ಅತೀ ಹಿಂದುಳಿದ ಸಮಾಜವಾಗಿದ್ದು, ಇಲ್ಲಿಯವರೆಗೆ ಸರ್ಕಲ್‌ ಹೊಂದಿರುವದಿಲ್ಲ. ಆದ್ದರಿಂದ ವಿಜಯಪುರ ನಗರದ ಅಥಣಿ ರಸ್ತೆಯ ಸೋಲಾಪೂರ ರಿಂಗ ರಸ್ತೆಯಲ್ಲಿ (ಇಟಗಿ ಪೆಟ್ರೋಲ್‌ ಪಂಪ್‌ ಹತ್ತಿರ) ಆದಿಕವಿ ಶ್ರೀಮಹರ್ಷಿ ವಾಲ್ಮೀಕಿಯವರ ಸರ್ಕಲ್‌ ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಲ್ಲಪ್ಪ ಕವಲಗಿ, ಎಸ್‌.ಬಿ. ಹಂಚಿನಾಳ, ಬಿ.ಎಸ್‌. ಗಸ್ತಿ, ಬಿ.ಕೆ. ತೊಂಡೆನ್ನವರ, ಹೆಚ್‌.ಕೆ. ಸಂದಿಮನಿ, ಅಪ್ಪು ದಳವಾಯಿ, ಶಂಕರ ನಾಯ್ಕೋಡಿ, ಸುರೇಶ ಕೊಣ್ಣೂರ, ಸದಾಶಿವ ಕೊಣ್ಣೂರ, ಎಲ್‌.ಎಸ್‌. ಮಾನೆ, ಚಂದ್ರು ನಾಟೀಕಾರ, ಅಶೋಕ ನಾಯ್ಕೋಡಿ ಮುಂತಾದವರು ಉಪಸ್ಥಿತರಿದ್ದರು.

loading...