ವಿಕಲ ಚೇತನರಿಂದ ಕೊಡಗು ಸಂತ್ರಸ್ತರಿಗಾಗಿ ಧನ ಸಂಗ್ರಹ

0
5
loading...

ವಿಜಯಪುರ: ವಿಜಯಪುರ ಜಿಲ್ಲಾ-ತಾಲೂಕು ವಿಕಲ ಚೇತನರಿಂದ ಕೊಡಗು ಸಂತ್ರಸ್ತರಿಗಾಗಿ ಧನ ಸಂಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು. ಸಂಗ್ರಹಣೆಯಾಗಿರುವ ಒಟ್ಟು 20,700 ರೂ.ಗಳನ್ನು ಸಂತ್ರಸ್ತರಿಗೆ ರವಾನಿಸಿದರು.
ಶ್ರೀಸಿದ್ದೇಶ್ವರ ದೇವಾಲಯದಿಂದ ಗಾಂಧಿ ವೃತ್ತ, ಬಸವೇಶರ ವೃತ್ತ, ಅಂಬೇಡ್ಕರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಂತ್ರಸ್ತರಿಗೆ ನಿಧಿ ನೀಡುವಂತೆ ಕೋರಿದರು. ಸಾರ್ವನಿಕರಿಂದಲೂ ಉತ್ತಮ ಸ್ಪಂದನೆ ದೊರಕಿತು.
ಸಬಿಯಾ ಬೇಗಂ ಡಿ. ಮರ್ತೂರ ಮಾತನಾಡಿ, ಕೊಡಗಿನಲ್ಲಿ ಮಳೆಯಲ್ಲಿ ನೊಂದ ಸಂತ್ರಸ್ಥರಿಗಾಗಿ ದಾನಿಗಳು ಇನ್ನು ಮುಂದೆ ಬರಬೇಕು. ಅಲ್ಲಿ ಪ್ರವಾಹದಲ್ಲಿ ಸಿಲುಕಿರುವ ಸಹೋದರನ್ನು ರಕ್ಷಣೆ ಮಾಡಿ, ಅವರ ಜೀವನ ಉಪಯಕ್ಕೆ ಸಹಾಯ ಮಾಡಲು ಧನಿಗಳು ಮುಂದೆ ಬರಬೇಕು. ಸರ್ಕಾರ ಶೀಘ್ರವಾಗಿ ಪ್ರವಾಹ ದಲ್ಲಿ ಸಿಲುಕಿರುವರನ್ನು ರಕ್ಷಣ ಮಾಡಬೇಕು. ರಾಜಕಾರಣಿಗಳು, ಉದ್ದೇಮಿಗಳು, ಶ್ರೀಮಂತರು ದೇಣಿಗೆ ನೀಡುಲು ಮುಂದೆ ಬರಬೇಕು ಎಂದು ಹೇಳಿದರು.
ಪರಶುರಾಮ ಗುನ್ನಾಪುರ, ಸುರೇಶ ಚವ್ಹಾಣ, ಸಂತೋಷ ಬಮ್ಮನಹಳ್ಳಿ, ಮಹೇಶ ತೋಟದ, ಸಂಗಮೇಶ ಹಿಟ್ನಳ್ಳಿ, ಕಂಟೆಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ವಿಠಲ ಹಂಚಿನಾಳ, ಸಾಗರ ಲಮಾಣಿ, ಯಾಸಿನ, ಶ್ರೀರಾಮ ನಾಯಕ, ನಿಮಿಶ ಆಚಾರ್ಯ, ಬಸವರಾಜ ಯಾಳವಾರ, ಶಂಕರ ಪವಾರ, ನಾಮದೇವ ದೊಡಮನಿ, ಸದ್ದಾಮ ಹೆಬ್ಬಾಳ, ಮನೋಜ ಶಿರೋಳ, ರಾಜು ಕುಮಟಗಿ, ಮಹೇಶ ಮುದೋಳ, ಅಶೋಕ ಚೋಳಕೆ ಭಾಗವಹಿಸಿದ್ದರು.

loading...