ವಿದ್ಯಾಕಾಶಿಯಾದ ತೋಟಗಾರಿಕೆ ವಿಶ್ವವಿದ್ಯಾಲಯ: ಡಾ. ಕೋಟಿಕಲ್

0
4
loading...

ಬಾಗಲಕೋಟೆ: `ತೋಟಗಾರಿಕೆ ವಿಷಯ ಅಧ್ಯಯನದ ಆಸಕ್ತಿಯಿಂದ ಬಂದಂತಹ ವಿದ್ಯಾರ್ಥಿಗಳಿಗೆ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಒಂದು ವರದಾನವಾಗಿದೆ. ಇಲ್ಲಿಯ ವಿಜ್ಞಾನಿಗಳ ಆಸಕ್ತಿ ಮತ್ತು ಶ್ರಮದ ಕಾರಣಗಳಿಂದ ನಿಮಗೆ ಪ್ರಾಯೋಗಿಕ ಅಧ್ಯಯನ ಲಭಿಸಿ ಸಂಪೂರ್ಣ ಮನದಟ್ಟಾಗುವಂತಾಗಿದೆ ಎಂದು ವಿಸ್ತರಣಾ ನಿರ್ದೆÃಶಕ ಡಾ. ವೈ. ಕೆ. ಕೋಟಿಕಲ್ ಹುನಗುಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ನಡೆಸಿದ ಚರ್ಚೆಯಲ್ಲಿ ವಿವರಿಸಿದರು.
ಹುನಗುಂದ ವಸ್ತçದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಬಿ.ಎಸ್ಸಿ.ಯ ಸಸ್ಯ ವಿಭಾಗದ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದಲ್ಲಿರುವ ಹಲವು ತೋಟಗಾರಿಕೆಗೆ ಸಂಬಂಧಿಸಿದ ಅಧ್ಯಯನಕ್ಕಾಗಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದರು. ವಿದ್ಯಾರ್ಥಿಗಳ ಜೊತೆ ವಿವಿಧ ತಳಿಗಳ ಹಣ್ಣು, ಪುಷ್ಪ, ತರಕಾರಿಗಳ ಕುರಿತು ಸಂವಾದ ನಡೆಸಿದರು. ಸಂವಾದ ರೂಪದಲ್ಲಿ ಮಾಡಿದ ಚರ್ಚೆ ವಿದ್ಯಾರ್ಥಿಗಳಲ್ಲಿ ತೋಟಗಾರಿಕೆ ಅಧ್ಯಯನ ಕುರಿತು ಇನ್ನೂ ಹೆಚ್ಚಿನ ಆಸಕ್ತಿ ಹುಟ್ಟಿಸಿ ಆಳವಾದ ಜ್ಞಾನ ಸಂಪಾದನೆಗೆ ನಾಂದಿಯಾಯಿತು ಎಂದು ಅವರನ್ನು ಕರೆತಂದ ಉಪನ್ಯಾಸಕರು ಅಭಿಪ್ರಾಯ ಪಟ್ಟರು.

ಡಾ. ಕುಲಪತಿ ಹಿಪ್ಪರಗಿ ತೋಟಗಾರಿಕೆ ಮತ್ತು ನರ್ಸರಿ ನಿರ್ವಹಣೆ, ಡಾ. ಅರುಣ ಕಾಂಬಳೆಯವರು ಕೊಯ್ಲು ತಂತ್ರಜ್ಞಾನ, ಡಾ. ಪ್ರಭುಲಿಂಗ ಅವರು ಅಂಗಾಂಶ ಕೃಷಿ, ಡಾ. ಎಸ್.ಎಲ್. ಜಗದೀಶ ಕೊಯ್ಲೊÃತ್ತರ ತಂತ್ರಜ್ಞಾನ ಮತ್ತು ಡಾ. ವಿಜಯಮಹಾಂತೇಶ ಕಳೆ ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ಪ್ರಾಯೋಗಿಕವಾಗಿ ತರಗತಿ ನಡೆಸಿಕೊಟ್ಟರು. ಡಾ. ಶಶಿಕಲಾ ಮಠ ಮತ್ತು ಹೂಲಗೇರಿ ಅವರ ನೇತೃತ್ವದಲ್ಲಿ ಬಂದ ತಮ್ಮ ಪಠ್ಯಕ್ರಮದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡರು. ಡಾ. ಮಹೇಶ ವೈ.ಎಸ್, ಡಾ. ವಸೀಮ್ ಹಾಗೂ ಡಾ. ಉಮಾ ಅಕ್ಕಿ ಉಪಸ್ಥಿತರಿದ್ದರು.

loading...