ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ: ಕುಲಸಚಿವ ಪ್ರೊ.ರಂಗರಾಜ

0
0
loading...

ಮುಧೋಳ: ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ತನ್ನದೆಯಾದ ಪ್ರತಿಭೆ ಇದ್ದೆ ಇರುತ್ತದೆ, ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳು ಸೂಕ್ತವಾದ ವೇದಿಕೆಯನ್ನು ಬಳಸಿಕೊಂಡು ತಮ್ಮಲ್ಲಿರುವ ಪ್ರತಿಭಾ ಶಕ್ತಿಯನ್ನು ತೋರಿಸಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಂಗರಾಜ ವನದುರ್ಗ ಹೇಳಿದರು.
ಬಾಗಲಕೋಟ ಬಿ.ವ್ಹಿ.ವ್ಹಿ ಸಂಘದ ಸ್ಥಳೀಯ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2018-19ನೇ ಸಾಲಿನ ಕ್ರೀಡಾ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ ವಿದ್ಯಾರ್ಥಿ ಜೀವನವನ್ನು ವ್ಯರ್ಥವಾಗಿ ಕಳೆಯದೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಭಾಗವಹಿಸಿ ಸಾಧನೆ ಮಾಡುವದರ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು, ವಿದ್ಯಾರ್ಥಿಗಳಲ್ಲಿ ಕೀಳರಿಮೆ ಇರಕೂಡದು, ತಾವು ಕಂಡ ಕನಸು ನನಸು ಮಾಡಲು ನಿರಂತರ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಮುಧೋಳ ತಾಲೂಕಿನ ಬೇಟೆ ನಾಯಿಗಳಿಗೆ ದೇಶವ್ಯಾಪಿ ಬೇಡಿಕೆ ಇದೆ, ಕನ್ನಡ ಸಾರಸ್ವತ ಲೋಕದಲ್ಲಿ ರನ್ನನ ಹೆಸರು ಅಮರವಾಗಿದೆ, ಈ ನಾಡಿನಲ್ಲಿ ಬೆಳೆಯುವ ಕಬ್ಬಿನ ಸಕ್ಕರೆ ಸಿಹಿ ಎಷ್ಟು ಮಹತ್ವದ ಸ್ಥಾನ ಹೊಂದಿದೆ ಅದರಂತೆ ಇಲ್ಲಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಹೆಸರು ಉಳಿಸಬೇಕು.
ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಪ್ರೊ.ಎ.ಜಿ.ಚಪ್ಪಳಗಾಂವ ಸ್ವಾಗತಿಸಿದರು. ಪ್ರೊ.ಜಿ.ಬಿ.ಅಣೆಪ್ಪನವರ ಅತಿಥಿಗಳ ಪರಿಚಯಿಸಿದರು. ಪ್ರೊ.ಎ.ವೈ.ಮುನ್ನೊಳ್ಳಿ ವಂದಿಸಿದರು. ಪ್ರೊ.ಆರ್‌.ಆರ್‌.ಮಾಲಿಪಾಟೀಲ ನಿರೂಪಿಸಿದರು.

loading...