ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ಬೆಳಸಿಕೊಳ್ಳಿ: ಎ.ಎಸ್‌.ಬಾಗವಾನ

0
8
loading...

ನಾಲತವಾಡ: ಮಕ್ಕಳು ಹೆಚ್ಚಾಗಿ ಕ್ರೀಡೆಯಲ್ಲಿ ಭಾಗವಹಿಸುವವರಾಗಬೇಕು ಎಂದು ತಾಲೂಕಾ ಶಿಕ್ಷಣ ಸಂಯೋಜಕ ಎ.ಎಸ್‌.ಬಾಗವಾನ ಹೇಳಿದರು.
ಸ್ಥಳಿಯ ವೀರೇಶ್ವರ ಪ್ರೌಢ ಶಾಲೆ ಆವರಣದಲ್ಲಿ ಹಮ್ಮಿಕೊಂಡ 2018ನೇ ಸಾಲೀನ ನಾಲತವಾಡ ವಲಯ ಮಟ್ಟದ ಪ್ರೌಢ ಶಾಲಾ ಕ್ರೀಡಾ ಕೊಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಇಂದಿನ ಮಕ್ಕಳು ಪಠ್ಯ ಪುಸ್ತಕದ ಜೋತೆಗೆ ಕ್ರೀಡಾ ಚಟುವಟಿಕೆಗಳನ್ನು ಸಹ ತಮ್ಮಲ್ಲಿ ಅಳವಡಿಸಿಕೊಳ್ಳಬೇಕು, ನೀವು ಪ್ರತಿಯೊಂದು ಕ್ರೀಡಾ ಕೊಟದದಲ್ಲಿ ಭಾಗವಹಿಸುವವರಾಗಬೇಕು, ಸೋಲು ಮತ್ತು ಗೆಲುವಿನ ಬಗ್ಗೆ ತಲೆಕಡೆಸಿಕೊಳ್ಳದೆ ಕ್ರೀಡೆಯಲ್ಲಿ ಭಾಗವಹಿಸಿ ಇದರಿಂದ ನಿಮ್ಮ ದೈಹಿಕ ಹಾಗೂ ಮಾನಸಿಕ ಶಕ್ತಿಯ ಬೆಳವಣಿಗೆ ಆಗುತ್ತದೆ, ಆಟದಾಗ ನಮ್ಮ ಮೇಲೆ ನಾವು ಹೆಚ್ಚು ಭರವಸೆ ಇಡಬೇಕು ನಾನು ಈ ಗುರಿಯನ್ನು ಎಲ್ಲದ್ದಕ್ಕಿಂತ ಮೊದಲು ಮುಟ್ಟುತ್ತೇನೆ ಎಂದು ದೃಡವಾದ ಸಂಕಲ್ಪದೊಂದಿಗೆ ಇಳಿದರೆ ಖಂಡಿತವಾಗಿ ನೀವು ಯಶಸ್ಸು ಸಾದಿಸುತ್ತೀರಿ, ಕ್ರೀಡೆಯಲ್ಲಿ ಯಾವತ್ತು ದ್ವೇಶ ಇರಬಾರದು ಇದರಿಂದ ನಿಮ್ಮ ಆಟದ ಏಕಾಗ್ರತೆ ಕಳೆದುಕೊಳ್ಳುತ್ತೀರಿ ಎಂದರು.

ಈ ವೇಳೆ ಸಿ.ಆರ್‌.ಪಿ ಎಂ.ಬಿ.ಚಲವಾದಿ, ಎಸ್‌.ಬಿ.ಪಾಟೀಲ, ಆರ್‌.ಸಿ. ಮುದ್ದೇಬಿಹಾಳ, ನಿವೃತ್ತ ಶಿಕ್ಷಕರಾದ ಎಸ್‌.ಎನ್‌.ಕಂಗಳ, ಜಂಗ ಮುರಾಳದ ಮುಖ್ಯಶಿಕ್ಷಕ ಎಸ್‌.ಆರ್‌.ನಾಯಕ,ಎ.ಬಿ.ತಾಳಿಕೋಟಿ, ಎ.ವಿ.ಜೋಶಿ, ಬಸ್ಸು ಹಾದಿಮನಿ, ಎಂ,ವಾಯ್‌.ಗೌಂಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

loading...