ವಿದ್ಯಾರ್ಥಿಗಳು ನಾಯಕತ್ವದ ಗುಣ ಬೆಳೆಸಿಕೊಳ್ಳಿ: ಮಾಜಿ ಸಚಿವ ಲಮಾಣಿ

0
6
loading...

ಕನ್ನಡಮ್ಮ ಸುದ್ದಿ-ರಾಣೇಬೆನ್ನೂರು: ಪ್ರತಿಯೊಬ್ಬರೂ ಉತ್ತಮ ಸಮಯಕ್ಕಾಗಿ ಕಾಯದೇ ಸಮಯವನ್ನೇ ಉತ್ತಮವಾಗಿ ಉಪಯೋಗಿಸಿಕೊಂಡು ತಮ್ಮ ಬದುಕನ್ನು ಉಜ್ವಲಗೊಳಿಸಬೇಕು ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಬಿಎಜೆಎಸ್‍ಎಸ್ ಸ್ವತಂತ್ರ ಪದವಿ ಪೂರ್ವ ಮಹಿಳಾ ಮಹಾವಿದ್ಯಾಯದಲ್ಲಿ 2018-19ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಹಾಗೂ ಶೈಕ್ಷಣಿಕ, ಸಾಂಸ್ಕøತಿಕ, ಕ್ರೀಡೆ ಮತ್ತು ಎನ್‍ಎಸ್‍ಎಸ್, ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿನಿಯರು ಜ್ಞಾನಾರ್ಜನೆ ಜೊತೆಗೆ ಸಹ ಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸೃಜನ ಶೀಲತೆ, ನಾಯಕತ್ವ ಗುಣ, ಅಭಿರುಚಿ, ಆಸಕ್ತಿಗಳನ್ನು ಸೂಕ್ತ ವೇದಿಕೆ ಮೂಲಕ ಅನಾವರಣಗೊಳಿಸಬೇಕು. ಈಗಿನ ದಿನಮಾನಗಳಲ್ಲಿ ಶಿಕ್ಷಣ ಕ್ಷೇತ್ರ ಪೈಪೋಟಿ ಕ್ಷೇತ್ರವಾಗಿದ್ದು, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿ ಉನ್ನತ ಸಾಧನೆ ಮಾಡಬೇಕು ಎಂದರು.
ಡಾ. ಆರ್.ಎಂ ಕುಬೇರಪ್ಪ ಮಾತನಾಡಿ, ಪಿಯುಸಿ ಅಧ್ಯಯನ ಬಹಳ ಮುಖ್ಯವಾದ ಘಟ್ಟ, ಸುಖ ದುಃಖ ಎರಡÀನ್ನೂ ಇದು ಸಮವಾಗಿ ಒಳಗೊಂಡಿದೆ. ಒಬ್ಬ ಕೃತಿಕಾರ ತನ್ನ ಪ್ರತಿಭೆಯಿಂದ ರಾಜ್ಯ ಜಾತಿ ಧರ್ಮ ಭಾಷೆ ಮೀರಿ ಜನರ ವಿಶ್ವಾಸವನ್ನು ತನ್ನ ಶ್ರೀಮಂತ ಪ್ರತಿಭೆಯಿಂದ ಆಕರ್ಷಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಜಿ.ಬಿ.ಹನುಮಂತರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಸ್.ಎ. ತಾಂಬೆ, ಉಪನ್ಯಾಸಕ ಕಾಂತೇಶ ಅಂಬಿಗೇರ, ಎ.ಶಂಕರನಾಯಕ್, ರಾಜು.ಎಂ.ಎನ್, ಎಲ್.ಎ.ಧೂಳೆಹೊಳೆ, ಅಶೋಕ ಬಣಕಾರ, ಬಿ.ಕೆ.ಚೌಡಣ್ಣನವರ, ಎಸ್.ಹೆಚ್.ಹುಚ್ಚಗೊಂಡರ, ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಇದ್ದರು.

loading...