ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಿ: ಶಾಸಕ ಉದಾಸಿ

0
3
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೇವಲ ಶಿಕ್ಷಣ ಪಡೆಯಲು ಕಾಲೇಜಿಗೆ ಬಂದರೆ ಸಾಲದು, ಸ್ಪರ್ಧಾ ಮನೋಭಾವನೆಯೊಂದಿಗೆ ಜ್ಞಾನಾರ್ಜನೆಗೆ ಹೆಚ್ಚು ಒತ್ತು ನೀಡುವ ಕಾಲ ಇದಾಗಿದೆ ಎಂದು ಶಾಸಕ ಸಿ.ಎಂ ಉದಾಸಿ ಹೇಳಿದರು.
ಸ್ಥಳೀಯ ಶ್ರೀಕುಮಾರೇಶ್ವರ ಪದವಿಪೂರ್ವ ಕಾಲೇಜಿನಲ್ಲಿ 18-19ನೇ ಸಾಲಿನ ಪ್ರಥಮ ಪಿ.ಯು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸ್ವಾಗತ ಮತ್ತು ಸಂಸತ್‍ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆಯ ಮಹತ್ವ ಅರಿತ ವಿದ್ಯಾರ್ಥಿಗಳು ಗುರಿ ಮುಟ್ಟುತ್ತಾರೆ. ದೇಶದ ಭವಿಶ್ಯ ಯುವ ಜನಾಂಗದ ಕೈಯಲ್ಲಿದೆ. ಕಲಿತ ಶಾಲೆ, ಗುರುಗಳಿಗೆ, ತಂದೆ-ತಾಯಿಗೆ ಗೌರವ ಪೂರ್ವಕವಾಗಿ ನಡೆದುಕೊಳ್ಳಿ ಎಂದು ಕರೆ ನೀಡಿದರು.
ಸಂಸ್ಥೆಯ ನಿರ್ದೆಶಕ ಜಿ.ಎಸ್.ಕೊಂಡೋಜಿ ಮಾತನಾಡಿ, ಜ್ಞಾನಾರ್ಜನೆಗೆ ಬರುವ ವಿದ್ಯಾರ್ಥಿಗಳು, ತಾವಾಯಿತು ತಮ್ಮ ಕಾಲೇಜಾಯಿತು ಎಂದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಕಳೆದುಕೊಂಡಾಗ ಮತ್ತೆ ಬಾರದೇ ಇರುವುದು ಶಿಕ್ಷಣ ಎಂದರು.
ಪ್ರಾಂಶುಪಾಲ ಟಿ.ಎನ್ ಕಾಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೊ. ಮಾಲತೇಶ.ಬಿ.ನಾಗಲಾಪೂರ, ಪ್ರೊ. ಗೌರಮ್ಮ ಅಂಕಲಕೋಟಿ ಇದ್ದರು.
ಇದೇ ವೇಳೆ ಪ್ರತಿಭಾ ಪುರಸ್ಕಾರ ನಡೆಯಿತು.
ನಾಗರತ್ನಾ ದುಂಡಸಿ ಸ್ವಾಗತಿಸಿದರು, ಸುನೀಲ ಭಾವಿಮನಿ ನಿರೂಪಿಸಿದರು, ಸಾವಳಗಿಸ್ವಾಮಿ ಮಠದ ಉಪನ್ಯಾಸಕರು ವಂದಿಸಿದರು.

loading...