ವಿದ್ಯಾರ್ಥಿಗೆ ವಿಷಯ ಸಂದೇಹವಿರದಂತೆ ಬೋಧಿಸಿ: ಪ್ರಸನ್ನಮೂರ್ತಿ

0
29

ಕನ್ನಡಮ್ಮ ಸುದ್ದಿ-ಧಾರವಾಡ: ಅಧ್ಯಾಪಕ ವೃತ್ತಿಗೆ ಬಹುಶಃ ಬೆಲೆ ಕಟ್ಟಲಿಕ್ಕೆ ಆಗಲ್ಲ ವಿದ್ಯಾರ್ಥಿಗಳೀಗೆ ಎಷ್ಟು ಕಲಿಸಿದರೂ ಕಡಿಮೆಯೇ ಗಣಿತದ ಸೂತ್ರಗಳ ಕುರಿತು ಬಹಳ ಸರಳವಾಗಿ ಶಿಕ್ಷಕರಿಗೆ ಪಿಪಿಟಿ ಮೂಲಕ ತಿಳಿಸಿಕೊಡುವ ಅಗತ್ಯವಿದೆ ಎಂದು ಟಿ.ಕೆ. ಪ್ರಸನ್ನಮೂರ್ತಿ ಹೇಳಿದರು.
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು, ಕರ್ನಾಟಕ ವಿಜ್ಞಾನ ಮತ್ತು ತಂತ್ರವಿಧ್ಯಾ ಮಂಡಳಿ ಸಹಯೋಗದಲ್ಲಿ ಜಿಲ್ಲೆಯ ಪ್ರೌಢಶಾಲಾ ಗಣಿತ ಶಿಕ್ಷಕರಿಗೆ ಏರ್ಪಡಿಸಿದ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕರು ಇಂತಹ ತರಬೇತಿಗಳ ಪ್ರಯೋಜನ ಪಡೆದುಕೊಂಡು ತರಗತಿಗೆ ಹೋಗುವ ಮೊದಲು ಆ ವಿಷಯದ ಕುರಿತು ಹೆಚ್ಚಿನ ಅಧ್ಯಯನ ಮಾಡಿ ವಿದ್ಯಾರ್ಥಿಗೆ ವಿಷಯವನ್ನು ಯಾವುದೇ ರೀತಿಯ ಸಂದೇಹವಿರದಂತೆ ಬೋಧಿಸಿದರೆ ಇಂತಹ ಕಾರ್ಯಕ್ರಮಗಳು ಸಾರ್ಥಕವಾಗುತ್ತದೆ ಎಂದರು.
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ಬಿ.ಗುಡಸಿ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳ ಜೊತೆ ತರಬೇತಿ ಪಡೆದು ವಿಷಯ ಸದುಉಪಯೋಗ ಮಾಡಿಕೊಳ್ಳಬೇಕು. ಶಿಕ್ಷಕರು ಮಕ್ಕಳಿಗೆ ಅತ್ಯುತ್ತಮ ಜ್ಞಾನ ಬೋಧಿಸಿದರೆ ಖಂಡಿತವಾಗಿಯೂ ಮಕ್ಕಳ ಜ್ಞಾನವನ್ನು ಹೆಚ್ಚು ಸಂಪಾದನೆ ಮಾಡುವುದರ ಜೊತೆಗೆ ಅವರಲ್ಲಿ ಕೌಶಲ್ಯವನ್ನು ಬೆಳೆಸಲು ಅನುಕೂಲವಾಗುತ್ತದೆ ಎಂದರು.
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕ ಸಿ.ಎಫ್‌.ಚಂಡೂರ ನಿರೂಪಿಸಿದರು. ವಿಶಾಲಾಕ್ಷಿ. ಎಸ್‌.ಜೆ ವಂದಿಸಿದರು. ಎ.ಎಸ್‌. ಅಂತಣ್ಣವರ, ಎಂ.ಸಿ. ಕಂದಗಲ್ಲ, ಆರ್‌.ಪಿ. ಗಾಳಿ, ಅಭಿಷೇಕ ಸಿ., ಶಶಿಧರ ಬಿ., ಪ್ರಮೋದ ಆರ್‌., ಎಂ.ಕೆ. ಹೊರಕೇರಿ, ಎಸ್‌.ವಿ. ಹಿರೇಮಠ ಉಪಸ್ಥಿತರಿದ್ದರು.

loading...