ವಿವಾದ ಬಿಟ್ಟು ವಿಕಾಸಕ್ಕೆ ಗಮನ ನೀಡಿ: ರಾಷ್ಟ್ರಪತಿ ಕೋವಿಂದ್

0
4
loading...

72ನೇ ಸ್ವಾತಂತ್ರ್ಯ ದಿವಸದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ವಿವಾದದಲ್ಲಿ ಕಾಲ ಕಳೆಯುವ ಬದಲು ವಿಕಾಸದತ್ತ ಸಾಗುತ್ತಿರುವ ದೇಶವನ್ನು ನೋಡಿ ಜೊತೆಗೆ ಅದ್ರಲ್ಲಿ ನೀವು ಭಾಗಿಯಾಗಿ ಎಂದು ಕೋವಿಂದ್ ಕರೆ ನೀಡಿದ್ದಾರೆ.

ದೇಶಕ್ಕಾಗಿ ರೈತರು ಹಾಗೂ ಯೋಧರು ದೊಡ್ಡ ಕೊಡುಗೆ ನೀಡ್ತಿದ್ದಾರೆ. ರೈತರು ಕೋಟಿ ಕೋಟಿ ಆಹಾರ ಉತ್ಪಾದನೆ ಮಾಡ್ತಾರೆ. ಸೈನಿಕರು ಕಠಿಣ ಪರಿಸ್ಥಿಯಲ್ಲೂ ದೇಶವನ್ನು ರಕ್ಷಣೆ ಮಾಡ್ತಾರೆಂದು ಕೋವಿಂದ್ ಹೇಳಿದ್ದಾರೆ. ಇದೇ ವೇಳೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪೂರ್ವಜರನ್ನು ರಾಷ್ಟ್ರಪತಿಗಳು ಸ್ಮರಿಸಿದ್ರು.

ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲದೆ ಹೋದ್ರೆ ಸ್ವಾತಂತ್ರ್ಯ ದಿನ ಅಪೂರ್ಣವೆಂದು ಅವ್ರು ಅಭಿಪ್ರಾಯಪಟ್ಟರು. ನಿರುದ್ಯೋಗ ತೊಲಗಿಸಿ, ಬಡತನ ನಿವಾರಣೆ ಆಗಬೇಕೆಂದು ರಾಷ್ಟ್ರಪತಿಗಳು ಹೇಳಿದ್ದಾರೆ. ದೇಶ ನಿರ್ಣಾಯಕ ಹಂತದಲ್ಲಿ ಸಾಗ್ತಿದೆ. ಇಂಥ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಬದಲು ಎಲ್ಲರೂ ಒಂದಾಗಿ ಬಡತನ, ಅನಕ್ಷರತೆ ಮತ್ತು ಅಸಮಾನತೆಯನ್ನು ದೂರ ಮಾಡಲು ಪ್ರಯತ್ನ ಮಾಡಬೇಕೆಂದು ಕೋವಿಂದ್ ಕರೆ ನೀಡಿದ್ದಾರೆ.

loading...