ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

0
11
loading...

ಸಿಂದಗಿ: ತಾಲೂಕಿನ ಕಲಕೇರಿ ಪೋಲಿಸ ಠಾಣಾ ವ್ಯಾಪ್ತಿಯ ಜಲಪೂರ ಗ್ರಾಮದಲ್ಲಿ ಆ.5 ರಂದು ಗ್ರಾಮದ ಗುರಪ್ಪ ಯಮುನಪ್ಪ ಹರಿಜನ ಎಂಬುವವರನ್ನು ಗ್ರಾಮದ ಕೇಲ ಜನ ಅಡ್ಡಾಡಿಸಿ ಹೊಡೆದು ಕೊಲೆ ಮಾಡಿದ್ದು ಮತ್ತು ಬೆಕಿನಾಳ ಗ್ರಾಮದಲ್ಲಿ ಅ.8 ರಂದು ದಲಿತ ಮಹಿಳೆ ನೀಲಗಂಗಮ್ಮ ಶಂಕ್ರೆಪ್ಪ ನಾಟೀಕಾರ ಅವರನ್ನು ಯಾರೋ ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮಂಗಳವಾರ ಕರೆ ನೀಡಿದ ಬಂದ ಸಂಪೂರ್ಣ ಯಶಸ್ವಿಯಾಯಿತು.
ಪಟ್ಟಣದ ಅನೇಕ ವ್ಯಾಪಾರಸ್ಥರು, ಬೀದಿ ವ್ಯಾಪಾರಸ್ಥರು ಅಂಗಡಿ ಮಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ ಮಾಡಿದ್ದರು. ಶಾಲಾ ಕಾಲೇಜುಗಳು ರಜೆ ಘೋಷಣೆಯಾಗಿರುವ ಕಾರಣ ವಿದ್ಯಾರ್ಥಿಗಳು, ಪ್ರಗತಿಪರ ವಿಚಾರವಾದಿಗಳು,ಮಹಿಳಾ ಹೋರಾಟಗಾರ್ತಿಯರು, ಕನ್ನಡಪರ, ರೈತಪರ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷದ ಕಾರ್ಯಕರ್ತರು ಬಂದಗೆ ಸಂಪೂರ್ಣ ಬೆಂಬಲ ನೀಡಿ ಹೋರಾಟದಲ್ಲಿ ಭಾಗಿಯಾಗಿದ್ದರು.

ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಪ್ರತಿಭಟನೆಯನ್ನುದ್ದೇಸಿಸಿ ಮಾತನಾಡಿ, ಇದೊಂದು ರಾಜ್ಯದ ಜನತೆ ಬೆಚ್ಚಿ ಬೀಳುವ ಘಟನೆ ಜಿಲ್ಲೆಯಲ್ಲಿಯೂ ಕೂಡಾ ಇಂತಾ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ ಜಿಲ್ಲಾ ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತ ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತು ಕೊಲೆಯಾದ ವ್ಯಕ್ತಿಗಳ ಕುಟುಂಗಳಿಗೆ ಸರ್ಕಾರದಿಂದ ಸಿಗಬಹುದಾದ ನೇರವನ್ನು ನಾನು ನೀಡಲು ಸಿದ್ದನಿದ್ದೇನೆ. ಈ ಪ್ರಕರಣದ ಆರೋಪಿಗಳನ್ನು ಕೂಡಲೆ ಪೋಲಿಸ ಇಲಾಖೆ ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಸೂಚಿಸಿದರು.
ಕೇಂದ್ರ ಸರ್ಕಾರ ಅಂಬೇಡ್ಕರ ಅವರ ಹೆಸರನ್ನು ಬಳಕೆ ಮಾಡಿ ಅಧಿಕಾರ ಮಾಡುತ್ತಿದ್ದೆ ಆದರೆ ಅಂಬೇಡ್ಕರ ರಚಿಸಿದ ಸಂವಿಧಾನವನ್ನು ಕಿತ್ತೊಗಿಯುವ ಹುನ್ನಾರವನ್ನು ಹಿಂಬದಿಯಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವುದು ದೇಶದ ದಲಿತರಿಗೆ ಹಿಂದುಳಿದವರಿಗೆ ಮತ್ತು ಅಲ್ಪ ಸಂಖ್ಯಾಯತರಿಗೆ ಮಾಡುವ ಪರಮ ಅನ್ಯಾಯ ಮುಂಬರುವ ದಿನಗಳಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದೇವೆ. ಮತ್ತು ಇತ್ತಿಚಿಗೆ ದೆಹಲಿಯ ಜಂತರಮಂತರದಲ್ಲಿ ಸಂವಿಧಾನದ ಪ್ರತಿಗಳನ್ನು ಕಿಡಿಗೇಡಿಗಳು ಸುಟ್ಟು ಹಾಕಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಇದಕ್ಕೆ ಅನೇಕ ರಾಜಕಾರಣಿಗಳ ಕೈವಾಡವಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಮೆರವಣಿಗೆ- ಪಟ್ಟಣದ ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತ ಅಲ್ಲಿಂದ ಡಾ.ಎಸ್.ಜಿ.ಬಮ್ಮಣ್ಣಿ ರಸ್ತೆಯ ಮಾರ್ಗವಾಗಿ ಮತ್ತೇ ಅಂಬೇಡ್ಕರ ವೃತ್ತದ ವರೆಗೆ ಪ್ರತಿಭಟನಾಕಾರರು ಬೃಹತ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ನಂತರ ಇಂಡಿ ಉಪವಿಭಾಗಾಧಿಕಾರಿ ಡಾ.ಪಿ.ರಾಜಾ ವÀುತ್ತು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಹೇಶ ಪೊದ್ದಾರ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಆಡಳಿತದ ಕೊಲೆಯಾದ ವ್ಯಕ್ತಿಗಳ ಕುಟುಂಬಕ್ಕೆ ತಲಾ ರೂ 4.12 ಲಕ್ಷಗಳನ್ನು ನೀಡಿದರು.

ಪ್ರತಿಭಟನೆಯಲ್ಲಿ ಡಿಎಸ್‍ಎಸ್ ಮುಖಂಡರಾದ ರಮೇಶ ದರಣಾಕರ, ಶ್ರೀಶೈಲ ಜಾಲವಾದಿ, ಪರಸುರಾಮ ಕಾಂಬಳೆ, ಹಣಮಂತ ಆಲಮೇಲ, ಮಂಜುನಾಥ ಯಂಟಮಾನ, ಜೈಭೀಮ ತಳಕೇರಿ, ಶರಣು ಚಲವಾದಿ, ಶಿವಪುತ್ರ ಮೇಲಿನಮನಿ, ಮುತ್ತು ಮಾಡ್ಯಾಳ, ಮಲ್ಲು ಬನಸೋಡೆ, ಧರೇಪ್ಪ ಮಂದೇವಾಲಿ, ಶಿವಾನಂದ ಹಾಂಕವಡೆ, ಬಸವರಾಜ ಇಂಗಳೆ, ರಾಜು ದೊಡ್ಡಮನಿ, ದೆವೀಂದ್ರ ಬನಸೋಡೆ, ರಾಜು ಪಿರಂಗಿ, ವಿಜಯ ಕಾಂಬಳೆ, ಸೇರಿದಂತೆ ವಿವಿಧ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಕಾರ್ಯಕರ್ತರು ಇದ್ದರು.

loading...