ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

0
14
loading...

ವಿಜಯಪುರ : ಬೆಳೆ ವಿಮೆ ಹಣ ಶೀಘ್ರ ಪಾವತಿ, ಕಬ್ಬಿನ ಬಾಕಿ ಹಣ ರೈತರ ಖಾತೆಗಳಿಗೆ ಜಮಾವಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ ಸಂಘ, ಕರ್ನಾಟಕ ಪ್ರದೇಶ ಕರ್ನಾಟಕ ಉತ್ತರ ಪ್ರಾಂತ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಧಿಕರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಕಿಸಾನ ಸಂಘದ ಪ್ರಮುಖ ಗುರುನಾಥ ಬಗಲಿ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆ ಬೀಳದೆ ಇರುವುದರಿಂದ ಜಿಲ್ಲೆಯಾದ್ಯಂತ ಶೇ.೩೦ ರಷ್ಟು ಬಿತ್ತನೆಯಾಗಿದ್ದು, ಈ ಎಲ್ಲ ಕಾರಣಗಳಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ, ಇನ್ನೊಂದೆಡೆ ಕಳೆದ ವರ್ಷ ಕಳೆದರೂ ಸಹ ಕಬ್ಬಿನ ಬಾಕಿ ಬೆಲೆ ರೈತರಿಗೆ ಪಾವತಿ ಮಾಡಿಲ್ಲ, ಸಾಲಸೋಲ ಮಾಡಿ ಕಬ್ಬಿನ ಬೆಳೆ ಬೆಳೆದ ರೈತರಿಗೆ ನ್ಯಾಯುಯುತವಾಗಿ ದೊರಕಬೇಕಾದ ಹಣವೂ ದೊರಕುತ್ತಿಲ್ಲ, ನಿಯಮಗಳನ್ನು ಗಾಳಿಗೆ ತೂರಿ ಕೆಲವೊಂದು ಸಕ್ಕರೆ ಕಾರ್ಖಾನೆಗಳು ಬಿಲ್ ಬಾಕಿ ಉಳಿಸುವ ಮೂಲಕ ರೈತರಿಗೆ ನಿತ್ಯ ತೊಂದರೆ ನೀಡುತ್ತಿವೆ ಎಂದರು. ರೈತರಿಗೆ ವರ್ಷಾನುಗಟ್ಟಲೇ ಪಾವತಿ ಮಾಡದೇ ಇರುವುದರಿಂದ ಕಬ್ಬು ಬೆಳೆಗಾರರು ಕಣ್ಣಿÃರಿನಲ್ಲಿ ಕೈ ತೊಳೆಯುವಂತಾಗಿದೆ,

ಮಲ್ಲನಗೌಡ ಮ. ಪಾಟೀಲ, ಚಂದ್ರಕಾಂತ ಜಂಬಗಿ, ರುದ್ರಪ್ಪ ತಂಗಡಿ, ಸಿದ್ದಣ್ಣ ಹರಿಜನ, ಸಂಬಾಜಿ ತಾಂಬೆ, ಅರ್ಜುನ ಕರಾತ, ಅಣ್ಣಪ್ಪ ಯಾಳವಾರ, ಎಂ.ಎಸ್. ಮ್ಯಾಗೇರಿ, ಶ್ರಿÃಮಂತ ಹುಲ್ಲೂರ, ಪಿ.ಐ. ಲಗಳಿ, ನವೀನ ಎಂ.ಪಿ. ಆರ್.ಎಚ್. ಬೆಟಗೇರಿ, ಬಿ.ಎಸ್. ಪಾಟೀಲ, ಎಸ್.ಎಸ್. ಬೆಳ್ಳುಂಡಗಿ, ಉದಯಕುಮಾರ ಹೊಸಮನಿ, ಶಾಂತಗೌಡ ಬಿರಾದಾರ, ಚಂದ್ರಕಾಂತ ಜಂಬಗಿ, ಭೀರಪ್ಪ ಮಂಗ್ಯಾಳ ಉಪಸ್ಥಿತರಿದ್ದರು.

loading...