ವಿವಿಧ ಸಂಘಟನೆಗಳಿಂದ ಸಂತ್ರಸ್ಥರಿಗಾಗಿ ದೇಣಿಗೆ ಸಂಗ್ರಹ

0
12
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಸತತ ಮಳೆ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗಿನ ಜನರ ಸಂಕಷ್ಟಕ್ಕೆ ವಾಣಿಜ್ಯ ನಗರಿಯ ಕರವೇ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಸಹಾಯ ಹಸ್ತ ಚಾಚಲು ಮುಂದಾಗಿವೆ.
ಕೊಡಗಿನ ಜನರ ಕಷ್ಟಕ್ಕೆ ನೆರವಾಗಲು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಹಾಗೂ ವಿವಿಧ ಕನ್ನಡಪರ ಸಂಘಟನೆಯ ಕಾರ್ಯಕರ್ತರು ತಮ್ಮ ತಮ್ಮ ಸಂಘನೆಯ ಸದಸ್ಯರಿಂದ ಹಣ ಸಂಗ್ರಹಿಸಿ ನೆರೆಯಲ್ಲಿ ಸಿಲುಕಿದ ಸಂತ್ರಸ್ಥರಿಗೆ ಅವಶ್ಯವಾಗಿರುವ ವಸ್ತುಗಳನ್ನು ಸಂಗ್ರಹಿಸಿ ಕಳುಹಿಸುತ್ತಿದ್ದಾರೆ. ಬ್ರೆಡ್, ಬಾಳೆಹಣ್ಣು ಖರೀದಿಸಿ ಪ್ಯಾಕ್ ಮಾಡಿ ಕಳುಹಿಸಲಾಗುತ್ತಿದೆ. ಇಂದು ಒಂದೇ ದಿನದಲ್ಲಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸಿ ಪ್ಯಾಕ್ ಮಾಡಿದ್ದಾರೆ. ಸಂಗೊಳ್ಳಿ ರಾಯಣ್ಣ ವೃತದಲ್ಲಿ ಖರೀದಿ ಮಾಡಿದ ತಿನಿಸುಗಳನ್ನು ಹಿಡಿದು ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಘೋಷಣೆ ಕೂಗಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಉತ್ತರ ಕರ್ನಾಟಕ ಜನತೆ, ರಾಜ್ಯ ಸರ್ಕಾರ, ಇಡೀ ಕರ್ನಾಟಕದ ಜನತೆ ನಿಮ್ಮೊಂದಿಗೆ ಇದೆ. ಭಯ ಪಡುವ ಅಗತ್ಯವಿಲ್ಲ ಎಂಬ ಘೋಷಣೆ ಕೂಗಿದ ಕಾರ್ಯಕರ್ತರು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹಣ ಸಂಗ್ರಹಿಸಿ ಅವಶ್ಯಕವಾದ ವಸ್ತುಗಳನ್ನು ಕಳುಹಿಸಲು ಮುಂದಾಗಿದ್ದಾರೆ.

loading...