ವಿಶೇಷ ಸೇವೆಗಿಳಿದ ಹವಾಯಿ ಮೊಬೈಲ್ ಕಂಪನಿ

0
2
loading...

ಹುವಾವೇ ಮೊಬೈಲ್ ಕಂಪನಿಯು ಕೇರಳ ಸಂತ್ರಸ್ತರ ನೆರವಿಗೆ ವಿಶೇಷ ರೀತಿಯಲ್ಲಿ ಧಾವಿಸಿದೆ. ಸಂತ್ರಸ್ತರಾಗಿರುವ ತನ್ನ ಗ್ರಾಹಕರಿಗೆ ಉಚಿತ ಸೇವೆಯ ನೆರವು ನೀಡುವುದಾಗಿ ಘೋಷಿಸಿದೆ.
ಪ್ರವಾಹದಲ್ಲಿ ಹಾನಿಗೊಳಗಾದ ಹುವಾವೇ ಮತ್ತು ಅದರ ಇತರ ಉಪ ಉತ್ಪನ್ನಗಳನ್ನು ತನ್ನ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ದುರಸ್ತಿ ಮಾಡಿಕೊಡುವುದಾಗಿ ಪ್ರಕಟಿಸಿದ್ದು, ಆಗಸ್ಟ್ 31 ರವರೆಗೂ ಈ ಸೌಲಭ್ಯ ಲಭಿಸಲಿದೆ.
ನೀರು ತುಂಬಿ ನಿಷ್ಪ್ರಯೋಜಕವಾಗಿರುವ ಸಾಧನಗಳು ಯಾವುದೇ ವೆಚ್ಚವಿಲ್ಲದೆಯೇ ದುರಸ್ತಿ ಮಾಡಲಾಗುತ್ತದೆ. ಹಾಗೆಯೇ ಕೇರಳ ಶೀಘ್ರದಲ್ಲೇ ಈ ದುರಂತದಿಂದ ಚೇತರಿಸಿಕೊಳ್ಳಲಿದೆ ಎಂದು ನಾವು ಭರವಸೆ ಹೊಂದಿದ್ದೇವೆ ಎಂದು ಹುವಾವೇ ಭಾರತದ ಉತ್ಪನ್ನ ಕೇಂದ್ರ ನಿರ್ದೇಶಕ ಅಲೆನ್ ವಾಂಗ್ ಹೇಳಿದ್ದಾರೆ.

loading...