ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಘೋಷಣೆ ಮಾಡಬೇಕು: ಕೆ.ಪಿ. ನಂಜುಂಡಿ

0
4
loading...

ವಿಜಯಪುರ : ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಕೇವಲ ೫ ಕೋಟಿ ರೂ. ಮಾತ್ರ ಅನುದಾನ ನೀಡಿದೆ, ಕೂಡಲೇ ಸರ್ಕಾರ ಎಚ್ಚೆತ್ತುಕೊಂಡ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಘೋಷಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.
ವಿಜಯಪುರದಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿಶ್ವಕರ್ಮ ಜಯಂತೋತ್ಸವ ಸಮಾರಂಭದ ಅಂಗವಾಗಿ ಶ್ರಿÃ ಗುರು ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ರಾಜ್ಯದ ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ ವಿಶ್ವಕರ್ಮ ಪಂಚಕಸಬುಗಳಿಗಾಗಿ ಸುಮಾರು ೬೯ಸಾವಿರ ಅರ್ಜಿಗಳು ಬಂದಿವೆ, ಆದರೆ ನಿಗಮಕ್ಕೆ ಕೇವಲ ಐದು ಕೋಟಿಯಷ್ಟು ಮಾತ್ರ ಅನುದಾನ ಮೀಸಲಿರಿಸಲಾಗಿದೆ, ಇಷ್ಟೊಂದು ಕಡಿಮೆ ಪ್ರಮಾಣದ ಅನುದಾನದಿಂದಾಗಿ ಯಾರೊಬ್ಬರಿಗೂ ಪ್ರಯೋಜನವಾಗುವುದಿಲ್ಲ. ಕಡಿಮೆ ಅನುದಾನ ಮೀಸಲಿರಿಸುವ ಮೂಲಕ ಸರ್ಕಾರ ವಿಶ್ವಕರ್ಮ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಒತ್ತಾಯಿಸಿದರು.

ಏಕದಂಡಿಮಠದ ಶ್ರಿÃ ಕಾಳ ಹಸ್ತೆÃಂದ್ರ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶ್ರಿÃ ಮಹೇಂದ್ರ ಸ್ವಾಮೀಜಿ, ಶ್ರಿÃ ನಾಗೇಂದ್ರ ಸ್ವಾಮಿಜಿ, ಜಿಲ್ಲಾಧ್ಯಕ್ಷ ಬಾಳು ಗಿರಗಾಂವಕರ, ಪ್ರಮೋದ ಬಡಿಗೇರ, ಕೃಷ್ಣಾ ಕವಲಗಿ, ಅಶೋಕ ಪತ್ತಾರ, ಶ್ರಿÃಕಾಂತ ಕುಂದನಗಾರ, ಸಂಗಮೇಶ ಬಡಿಗೇರ, ರಾಜು ಸೋನಾರ, ಪರಮಾನಂದ ಬಡಿಗೇರ, ಸಂತೋಷ ವಿಶ್ವಕರ್ಮ, ಯಚರಪ್ಪ ಬಡಿಗೇರ, ವಿಜಯ ಸೋನಾರ, ಈರಣ್ಣ ಪತ್ತಾರ, ವೆಂಕಣ್ಣ ಬಡಿಗೇರ, ಶಿವಾನಂದ ಯರನಾಳ, ಮೀನಾ ಕುಂದನಗಾರ ಪಾಲ್ಗೊಂಡಿದ್ದರು.

loading...