ವಿಶ್ವ ಸ್ನೆÃಹಿತರ ದಿನ: ಒಂದು ಇಂಟರೆಸ್ಟಿಂಗ್ ಕಹಾನಿ!

0
5
loading...

ನಿಷ್ಕಲ್ಮಷ ಸಂಬಂಧಕ್ಕೆ ಮತ್ತೊಂದು ಹೆಸರೇ ಸ್ನೆÃಹ ಯಾವುದೇ ಸಂಬಂಧಗಳು ಮುರಿದು ಬಿದ್ದರೂ ಸ್ನೆÃಹ ಮಾತ್ರ ಕೊನೇ ತನಕ ಗಟ್ಟಿಯಾಗಿರುತ್ತದೆ. ಅದರ ಶಕ್ತಿಯೇ ಹಾಗೆ. ಸ್ನೆÃಹಿತರು ಯಾವುದೇ ಕಾರಣಗಳಿಂದ ದೂರಾದರೂ ಯಾವತ್ತಾದರೂ ಅವರ ಸ್ನೆÃಹ ಮತ್ತೆ ಒಂದಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಸ್ನೆÃಹವು ಚಿರಾಯುವಾಗಿದೆ.
ಸ್ನೆÃಹಿತರ ಬಗ್ಗೆ ತಮಗಿರುವ ಕಾಳಜಿ ವ್ಯಕ್ತಪಡಿಸುವ ಸಲುವಾಗಿ ವಿಶ್ವದೆಲ್ಲೆಡೆಯಲ್ಲಿ ಸ್ನೆÃಹಿತರ ದಿನವನ್ನು ಆಚರಿಸಲಾಗುತ್ತದೆ. ಸ್ನೆÃಹಿತರ ದಿನ, ಅದರ ಮೂಲ, ಅದು ಹೇಗೆ ಆರಂಭವಾಯಿತು, ವಿವಿಧ ದೇಶಗಳಲ್ಲಿ ಅದನ್ನು ಹೇಗೆ ಆಚರಿಸಲಾಗುತ್ತದೆ ಹಾಗೂ ಮತ್ತಿತರ ಕೌತುಕದ ವಿಷಯಗಳನ್ನು ಈ ಲೇಖನವು ನಿಮ್ಮ ಮುಂದಿಡಲಿದೆ. ಸ್ನೆÃಹದ ಬಗ್ಗೆ ಸಾವಿರಾರು ವರ್ಷಗಳಿಂದ ಚರ್ಚೆ ನಡೆಸಲಾಗುತ್ತಿದೆ.
ನಂಬಿಕೆ, ಪ್ರೊÃತ್ಸಾಹ, ಸಂವಹನ, ಪ್ರಾಮಾಣಿಕತೆ, ತಿಳುವಳಿಕೆ, ಕರುಣೆಯನ್ನು ಒಳಗೊಂಡಿರುವಂತಹ ಅತ್ಯಂತ ದೃಢ ಸಂಬಂಧವೇ ಸ್ನೆಹ. ಸ್ನೆÃಹಿತರ ಬಗ್ಗೆ ಕಾಳಜಿ ಮತ್ತು ಪ್ರಿÃತಿ ವ್ಯಕ್ತಪಡಿಸಲು ಯಾವುದೇ ವಿಶೇಷ ದಿನ ಬೇಕೆಂದಿಲ್ಲ. ಆದರೆ ಸ್ನೆÃಹಿತರ ದಿನವು ನಿಮ್ಮ ಸ್ನೆÃಹಿತರ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಗೌರವ ತೋರಿಸುವಂತಹ ಒಂದು ಅವಕಾಶವನ್ನು ಒದಗಿಸುತ್ತದೆ.
ಈ ಜಗತ್ತಿನಲ್ಲಿ ಇನ್ನೂ ಗಟ್ಟಿಯಾಗಿ ಉಳಿದಿರುವ ಸಂಬಂಧವೆಂದರೆ ಅದು ಸ್ನೆÃಹ ಮಾತ್ರ. ಇದು ಅತ್ಯಂತ ವಿಶೇಷವಾಗಿರುಂತಹ ಆಕರ್ಷಣೆ ಮತ್ತು ನಂಬಿಕೆಯ ಸಂಬಂಧ. ಸ್ನೆÃಹವೆಂದರೆ ನಮ್ಮ ಬಗ್ಗೆ ಕಾಳಜಿ ವಹಿಸುವ ಮತ್ತು ಕಷ್ಟದಲ್ಲಿ ಹೆಗಲು ಕೊಡುವಂತಹ ಒಂದು ಅಭೂತಪೂರ್ವ ಸಂಬಂಧ.
ಸ್ನೆÃಹಿತರ ದಿನವನ್ನು ಮೊದಲು ಆರಂಭಿಸಿದವರು ಜಾಯ್ಸ್ ಹಾಲ್. ೧೯೧೯ರಲ್ಲಿ ಹಾಲ್ ಮಾರ್ಕ್ ಕಾರ್ಡ್ ಗಳನ್ನು ಸ್ಥಾಪಿಸಿದ ಈತ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಜನರು ಸ್ನೆÃಹಿತರ ದಿನವಾಗಿ ಆಚರಿಸಬೇಕೆಂದು ಬಯಸಿ ಇದನ್ನು ಆರಂಭಿಸಿದ. ೧೯೫೮ರ ಜುಲೈ ೨೦ರಂದು ಡಾ. ಅರ್ಟೆಮಿಯೊ ಬ್ರಾಚೊ ಎಂಬವರು ವಿಶ್ವ ಮಟ್ಟದಲ್ಲಿ ಸ್ನೆÃಹಿತರ ದಿನವನ್ನು ಆಚರಿಸಬೇಕೆಂಬ ಪ್ರಸ್ತಾಪವನ್ನಿಟ್ಟರು. ಪರಾಗ್ವೆಯ ಅಸುನಸಿಯೊನ್ ನಿಂದ ೨೦೦ ಕಿ.ಮೀ. ಉತ್ತರದಲ್ಲಿರುವ ಪರಾಗ್ವೆ ನದಿಯ ನಗರದವಾದ ಪುರ್ಟೊ ಪಿನಾಸ್ಕೊÃದಲ್ಲಿ ತನ್ನ ಸ್ನೆÃಹಿತರೊಂದಿಗೆ ರಾತ್ರಿಯೂಟವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಬ್ರಾಚೋ ಅವರು ಈ ಪ್ರಸ್ತಾವವನ್ನಿಟ್ಟಿದ್ದರು. ೨೦೧೧ ಎಪ್ರಿಲ್ ೨೭ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜುಲೈ ೩೦ನ್ನು ಅಂತಾರಾಷ್ಟಿçÃಯ ಸ್ನೆÃಹಿತರ ದಿನವನ್ನಾಗಿ ಅಚರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು. ದಕ್ಷಿಣ ಅಮೆರಿಕಾದ ದಕ್ಷಿಣಭಾಗದ ಕೆಲವೊಂದು ರಾಷ್ಟçಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಪರಾಗ್ವೆಯಲ್ಲಿ ಇದನ್ನು ಆಚರಿಸಲಾಗುತ್ತದೆ. ೧೯೫೮ರಲ್ಲಿ ಜುಲೈ ೩೦ನ್ನು ವಿಶ್ವ ಸ್ನೆÃಹಿತರ ದಿನವನ್ನಾಗಿ ಆಚರಿಸಲು ಪರಾಗ್ವೆ ಪ್ರಸ್ತಾವ ಮಾಡಿತ್ತು. ಸಾಂಪ್ರದಾಯಿಕವಾಗಿ ಆಗಸ್ಟ್ನ ಮೊದಲ ಭಾನುವಾರವನ್ನು ಸ್ನೆÃಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಕೆಲವೊಂದು ರಾಷ್ಟçಗಳಲ್ಲಿ ಸ್ನೆÃಹಿತರ ದಿನ ಆಚರಣೆಗೆ ಯಾವುದೇ ನಿಗದಿತ ದಿನವಿಲ್ಲ. ಗ್ರಿÃಟಿಂಗ್ ಕಾರ್ಡ್ ಕಂಪೆನಿಗಳಿಂದ ಆರಂಭವಾದಂತಹ ಈ ಆಚರಣೆಯು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಪಡೆದುಕೊಂಡು ರಜಾದಿನವನ್ನು ತುಂಬಾ ಆಸಕ್ತಿಯಿಂದ ಆಚರಿಸಲಾಗುತ್ತಿದೆ. ಅದರಲ್ಲೂ ಭಾರತ, ಬಾಂಗ್ಲಾದೇಶ ಮತ್ತು ಮಲೇಶಿಯಾದಲ್ಲಿ ಇದರ ಬಗ್ಗೆ ಆಸಕ್ತಿ ಬೆಳೆಯುತ್ತಿದೆ.
ದಕ್ಷಿಣ ಏಶ್ಯಾದಲ್ಲಿ ರಜಾದಿನವನ್ನು ಪ್ರಚುರ ಮಾಡುವವರು ೧೯೩೫ರಲ್ಲಿ ಅಮೆರಿಕಾದಲ್ಲಿ ನೆಲೆಸಿರುವಂತಹ ತಮ್ಮ ಸ್ನೆÃಹಿತರಿಗಾಗಿ ಈ ದಿನವನ್ನು ಅರ್ಪಿಸುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ. ಆದರೆ ಇದರ ನಿಜವಾದ ವರ್ಷ ೧೯೧೯. ಸ್ನೆÃಹಿತರ ದಿನದಂದು ಉಡುಗೊರೆ, ಕಾರ್ಡ್ ಮತ್ತು ಕೈಗೆ ರಿಬ್ಬನ್‌ನಂತಹ ಪಟ್ಟಿಗಳನ್ನು ಧರಿಸುವುದು ಸಾಮಾನ್ಯವಾಗಿ ಆಚರಿಸಿಕೊಂಡಿರುವಂತಹ ಸಂಪ್ರದಾಯ. ೧೯೩೫ರಲ್ಲಿ ಅಮೆರಿಕಾದ ಕಾಂಗ್ರೆಸ್ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ರಾಷ್ಟಿçÃಯ ಸ್ನೆÃಹಿತರ ದಿನವನ್ನಾಗಿ ಘೋಷಿಸಿತು.
ಸ್ನೆÃಹಿತರಿಗೆ ಗೌರವ ಸೂಚಿಸುವ ಸಲುವಾಗಿ ರಾಷ್ಟಿçÃಯ ರಜೆಯನ್ನು ಘೋಷಿಸಿದೆ. ಮಹಿಳೆಯರ ಸ್ನೆÃಹಿತರ ದಿನವನ್ನು ಸಪ್ಟೆಂಬರ್ ತಿಂಗಳ ಮೂರನೇ ಭಾನುವಾರದಂದು ಆಚರಿಸಲಾಗುತ್ತದೆ. ಪ್ರತಿಯೊಬ್ಬರು ಸ್ನೆÃಹಿತರ ದಿನವನ್ನು ಆಚರಿಸಿದರೆ ಬೆಸ್ಟ್ ಫ್ರೆಂಡ್ಸ್ ಅನಿಮಲ್ ಸೊಸೈಟಿಯು ಉತ್ತಮ ಸ್ನೆÃಹಿತರ ವಾರವನ್ನು ಆಚರಿಸುತ್ತಾ ಬಂದಿದೆ. ಅದು ಪ್ರತೀ ವರ್ಷ ಜೂನ್ ೨೩ರಿಂದ ೨೫ರ ತನಕ. ಇದನ್ನು ಪ್ರಾಣಿಗಳ ರಕ್ಷಣೆ ಮತ್ತು ಹಕ್ಕಿಗಾಗಿ ಆಚರಿಸುತ್ತಾ ಇದೆ. ಈ ವಾರದ ಮೊದಲ ದಿನವನ್ನು ಉತ್ತಮ ಗೆಳೆಯನ ದಿನವೆಂದು ಕರೆಯಲಾಗುತ್ತದೆ.

loading...