ವ್ಯಸನಮುಕ್ತ ದಿನಾಚರಣೆ ಆಚರಣೆ

0
7
loading...

ಮುಧೋಳ: ಯುವಕರು ದುಶ್ಚಟ, ದುರಭ್ಯಾಸದಿಂದ ದೂರ ಇರಬೇಕು ಎಂದು ತಹಸೀಲ್ದಾರ ಡಿ.ಜೆ.ಮಹಾತ್‌ ಹೇಳಿದರು.
ತಾಲೂಕಾ ಆಡಳಿತ, ನಗರಸಭೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆಶ್ರಯದಲ್ಲಿ ಬುಧವಾರ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ÷ಇಲಕಲ್‌ ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠಾದೀಶ ಲಿಂ.ಡಾ.ಮಹಾಂತ ಸ್ವಾಮಿಗಳು ಅ.1 ರಂದು ತಮ್ಮ ಹುಟ್ಟು ಹಬ್ಬವನ್ನು ವ್ಯಸನಮುಕ್ತ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಸರ್ಕಾರ ಕಳೆದ ವರ್ಷದಿಂದ ಅ.1 ರಂದು ವ್ಯಸನಮುಕ್ತ ದಿನಾಚರಣೆ ಆಚರಣೆ ಆಚರಿಸಲು ಆರಂಭಿಸಿತು,ಇದು ಎರಡನೇ ವರ್ಷದ ಸರ್ಕಾರಿ ವ್ಯಸನಮುಕ್ತ ದಿನಾಚರಣೆಯಾಗಿರುತ್ತದೆ ಎಂದರು.
ಯುವಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವದರ ಮೂಲಕ ದೇಶದ ಸಂಪತ್ತನ್ನು ಉಳಿಸಿಕೊಳ್ಳಬೇಕೆಂದು ಮನವಿ ಮಾಡಿದರು, ನಗರಸಭೆ ಪೌರಾಯುಕ್ತ ರಮೇಶ ಜಾಧವ, ತಾಲೂಕಾ ಆರೋಗ್ಯಾಽಕಾರಿ ಡಾ.ವೆಂಕಟೇಶ ಮಲಘಾಣ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಆರ್‌.ಎಚ್‌.ನಿಡೋಣಿ, ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹಾಂತೇಶ ನರಸನಗೌಡ್ರ, ಪ್ರಾಚಾರ್ಯ ಡಾ.ಎನ್‌.ಬಿ. ಇಂಗನಾಳ, ರೋವರ್‌ ಸ್ಕೌಟ್ಸ್‌ ಲೀಡರ ಎಂ.ಕೆ.ಗವಿಮಠ, ರೇಂಜರ್‌ ಲೀಡರ್‌ ಎಸ್‌.ಬಿ.ಮೇಟಿ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

loading...