ಶರಣರ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಿ: ಶ್ರೀಗಳು

0
4
loading...

ಕನ್ನಡಮ್ಮ ಸುದ್ದಿ-ಸವಣೂರ: ಉತ್ತಮ ಕಾರ್ಯಕ್ಕೆ ಸಹಕಾರ ನೀಡುವ ಮೂಲಕ ಧಾರ್ಮಿಕ ಚಿಂತನೆ ಕೈಗೊಳ್ಳುವ ವ್ಯಕ್ತಿ ಮಾತ್ರ ಸಾರ್ಥಕ ಜೀವನ ಪಡೆಯಲು ಸಾಧ್ಯವಾಗಲಿದೆ ಎಂದು ಕುಮಾರ ಸ್ವಾಮೀಜಿ ಹೇಳಿದರು.
ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ 160ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ನಿರಂತರ ಶರಣರ ಜೀವನ ತತ್ವಗಳನ್ನು ಪಾಲಿಸುವ ಮೂಲಕ ಜನ ಸಾಮಾನ್ಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯವಾಗಲಿದೆ. ಆದ್ದರಿಂದ, ನಿತ್ಯ ಕಾಯಕದೊಂದಿಗೆ ಧಾರ್ಮಿಕ ಹಾಗೂ ಧಾಸೋಹ ಮನೋಭಾವನೆಯನ್ನು ಹೊಂದಿ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವದು ಪಾಲಕರ ಕರ್ತವ್ಯವಾಗಿದೆ ಎಂದರು.
ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಾನಸಿಕವಾಗಿ ಒಂದು ಮಾಸ(ತಿಂಗಳ)ದ ಕಾಲ ಸರ್ವರು ಧಾರ್ಮಿಕ ಚಿಂತನೆಗಳು ಆಲಿಸಲು (ಶ್ರವಣ) ಶ್ರಾವಣಮಾಸವನ್ನು ಆಚರಿಸುವದು ಹಿಂದೂ ಧರ್ಮದ ಸಂಸ್ಕøತಿಯಾಗಿದೆ ಎಂದರು.ಶಿಕ್ಷಕಿ ಮಂಜುಳಾ ರಾಶಿನಕರ ‘ಅಕ್ಕಮಹಾದೇವಿ ಜೀವನ’ ಕುರಿತು ಉಪನ್ಯಾಸ ನೀಡಿದರು.
ಮುಖಂಡರಾದ ಮಹೇಶ ಸಾಲಿಮಠ, ವೀರುಪಾಕ್ಷಪ್ಪ ಸಿಂಧೂರ, ರಮೇಶ ಮರೋಳ, ಮೋಹನ ಮೆಣಸಿನಕಾಯಿ ಇದ್ದರು. ನಂತರ, ಅಕ್ಷತಾ ಬಿಂದಲಗಿ ಹಾಗೂ ಲಲಾಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ವಚನ ನೃತ್ಯ ಜರುಗಿತು. ಶಿಕ್ಷಕರಾದ ಪಿ.ವಿ. ಗುತ್ತಲ ಹಾಗೂ ಡಿ.ಎಫ್.ಬಿಂದಲಗಿ ಕಾರ್ಯಕ್ರಮ ನಿರ್ವಹಿಸಿದರು.

loading...