ಶಾಂತಿಯುತವಾಗಿ ನಡೆದ ಪುರಸಭೆ ಚುನಾವಣೆ

0
2
loading...

ಶಾಂತಿಯುತವಾಗಿ ನಡೆದ ಪುರಸಭೆ ಚುನಾವಣೆ

ಕನ್ನಡಮ್ಮ ಸುದ್ದಿ:ಸವದತ್ತಿ: ಸವದತ್ತಿ ಯಲ್ಲಮ್ಮ ಪುರಸಭೆಯ ೨೦೧೮ ರ ಚುನಾವಣೆಯ ಮತದಾನ ಇಂದು ಶಾಂತಿಯುತವಾಗಿ ನಡೆಯಿತು ಪಟ್ಟಣದ ೨೭ ವಾರ್ಡಗಳಲ್ಲಿ ೨೭ ಜನ ಭಾರತೀಯ ಜನತಾ ಪಕ್ಷದ ವತಿಯಿಂದ ೨೭ ಜನ ಕಾಂಗ್ರೆಸ ಪಕ್ಷದ ವತಿಯಿಂದ ಸ್ಪರ್ದಿಸಿದ್ದರು ಒಬ್ಬರು ಪಕ್ಷೆÃತರವಗಿ ಸ್ಪರ್ದಿಸಿದ್ದರು ಪಟ್ಟಣದಲ್ಲಿ ಬಿಸಿಲು ಇದ್ದರೂ ಸಹ ಮತದಾರರು ಸಾಲು ಸಾಲಾಗಿ ಬಂದು ಮತದಾನ ಮಾಡಿದರು . ಪಟ್ಟಣದಲ್ಲಿ ಸಂಪೂರ್ಣವಾಗಿ ಶಾಂತಿಯುತವಾಗಿ ಮತದಾನ ನಡೆಯಿತು. ಮತದಾನ ದಿನವಾದ ಇಂದು ಭಾರತೀಯ ಜನತಾ ಪಕ್ಷದ ಶಾಸಕ ಆನಂದ ಮಾಮನಿ ಯವರು ವಾರ್ಡ ನಂ ೨೦ ರ ಮತಗಟ್ಟೆಯಲ್ಲಿ ಮತ ಚಲಾಯಿಸಿದರು ಅದೇ ರೀತಿಯಾಗಿ ಮಾಜಿ ಶಾಸಕ ಸುಭಾಸ ಎಸ ಕೌಜಲಗಿ ದಂಪತಿಗಳು ವಾರ್ಡ ನಂ ಗಿರಿಜನ್ನವರ ಓಣಿಯ ವಾರ್ಡ ನಂ ೨ ರ ಮತಗಟ್ಟೆಯಲ್ಲಿ ಮೂಲಿಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತದಾನ ಮಾಡಿದರು ನಂತರ ಕಾಂಗ್ರೆÃಸ ಪಕ್ಷದ ಅಭ್ಯರ್ಥಿಗಳಾದ ವಿಶ್ವಾಸ ವೈದ್ಯ ಹಾಗೂ ಆನಂದ ಚೋಪ್ರಾ ದಂಪತಿಗಳು ಮತಚಲಾಯಿಸಿದರು.

loading...