ಶಾಂತಿಯುತವಾಗಿ ನಡೆದ ಬ್ಯಾಂಕ್‍ನ ನಿರ್ದೇಶಕರ ಆಯ್ಕೆ ಚುನಾವಣೆ

0
8
loading...

ಕನ್ನಡಮ್ಮ ಸುದ್ದಿ-ಕುಮಟಾ: ಇಲ್ಲಿನ ಸುವರ್ಣಕರ್ ಬ್ಯಾಂಕ್‍ನ ನಿರ್ದೇಶಕರ ಆಯ್ಕೆ ಚುನಾವಣೆ ಶನಿವಾರ ಸುವರ್ಣಕರ್ ಬ್ಯಾಂಕ್‍ನಲ್ಲಿ ಶಾಂತಿಯುತವಾಗಿ ನಡೆಯಿತು.
ಮುಂಜಾನೆ 8 ರಿಂದ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಮದ್ಯಾಹ್ನ 12.30 ರಷ್ಟಿಗೆ ಶೇ 20ರಷ್ಟು ಮತದಾನ ನಡೆದಿತ್ತು. ಸಮಿತಿಯ ರಚನೆಗೆ 15 ಸದಸ್ಯರ ಆಯ್ಕೆ ಇರುವುದರಿಂದ ಒಬ್ಬೊಬ್ಬ ಮತದಾರನಿಗೂ 11 ಜನರನ್ನು ಆಯ್ಕೆ ಮಾಡುವ ಹಕ್ಕು ಅವರಲ್ಲಿದ್ದ ಕಾರಣ ಮತದಾನ ಪ್ರಕ್ರಿಯೇಯು ಕೊಂಚ ನಿಧಾನಗತಿಯಲ್ಲಿ ಸಾಗುವಂತಾಯಿತು. ಮಳೆಯ ನಡುವೆಯೂ ಮತದಾರರು ಆಸಕ್ತಿಯಿಂದ ಮತದಾನದಲ್ಲಿ ತೊಡಗಿರುವುದು ವಿಶೇಷವಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಬಿರುಸಿನ ಮತದಾನ ನಡೆಯಿತು. ಅಂತೀಮವಾಗಿ ಶೇ.50 ರಷ್ಟು ಮತದಾನ ನಡೆಯಿತು. ಒಟ್ಟು 840 ಮತದಾರರಲ್ಲಿ 399 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಈ ಚುನಾವಣೆಯಲ್ಲಿ ಸಾಮಾನ್ಯ 18, ಹಿಂದುಳಿದ 4, ಮಹಿಳಾ ಕೋಟಾದಲ್ಲಿ 5 ಸೇರಿದಂತೆ ಒಟ್ಟು 27 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಾಮಾನ್ಯ ವಿಭಾಗದಲ್ಲಿ ಸ್ಪರ್ಧಿಸಿದ್ದ 18ರ ಪೈಕಿ 11 ಅಭ್ಯರ್ಥಿಗಳು ಆಯ್ಕೆಯಾಗಬೇಕು. ಹಿಂದುಳಿದ 4 ಅಭ್ಯರ್ಥಿಗಳಲ್ಲಿ 2 ಮಂದಿ ಆಯ್ಕೆಯಾಗಬೇಕು. 5 ಮಂದಿ ಮಹಿಳೆಯರಲ್ಲಿ 2 ಅಭ್ಯರ್ಥಿಗಳು ಆಯ್ಕೆಯಾಗಬೇಕು. ಒಟ್ಟಿನಲ್ಲಿ ಚುನಾವಣೆಯ ದಿನದಂದು ಅಭ್ಯಥಿಗಳ ಮೊಗದಲ್ಲಿದ್ದ ಗೆಲುವಿನ ಹುಮ್ಮಸ್ಸು ಮತ ಏಣಿಕೆಯ ನಂತರವೂ ಇರುತ್ತದೆಯೋ ಕಾದುನೋಡಬೇಕು. ಇನ್ನು ಕಾರ್ಯಕಾರಿ ಮಂಡಳಿ ಅಧ್ಯಕ್ಷರ ಪಟ್ಟ ಯಾರಿಗೆ ದೊರೆಯಲಿದೆ ಎನ್ನುವುದು ಕಾದು ನೋಡಬೇಕು.
ಚುನಾವಣಾಧಿಕಾರಿಯಾಗಿ ಗ್ರೆಡ್-2 ತಹಸೀಲ್ದಾರ್ ಬಿ ಎಚ್ ಗುನಗಾ ಕಾರ್ಯನಿರ್ವಹಿಸಿದ್ದರು. ಸುಮಾರು 10 ಸರ್ಕಾರಿ ನೌಕರರ ಜೊತೆಗೆ ಬ್ಯಾಂಕ್‍ನ ಸಿಬ್ಬಂದಿ ಈ ಚುನಾವಣೆಗೆ ಸಹಕಾರ ನೀಡಿದ್ದರು.

loading...