ಶಾಂತಿ, ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಿಸಲು ಸೂಚನೆ

0
14
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಬಕ್ರೀದ್ ಹಬ್ಬ ಆಚರಣೆ ವೇಳೆ ಶಾಂತಿ, ಸೌಹಾರ್ದತೆ ಕಾಪಾಡಬೇಕು. ಅ.22 ರಂದು ಬಕ್ರೀದ್ ಹಬ್ಬವಿದೆ. ಶಾಂತಿಯುತವಾಗಿ ಹಬ್ಬ ಆಚರಿಸಲು ಎಲ್ಲ ಸಮುದಾಯದವರು ಕೈ ಜೋಡಿಸಬೇಕು ಎಂದು ಪಿಎಸ್‍ಐ ಬಿ.ವೈ. ಕಜಗಲ್ಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜರುಗಿದ ಬಕ್ರೀದ್ ಹಬ್ಬ ನಿಮಿತ್ತ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.ಹಬ್ಬದ ಸಂದರ್ಭದಲ್ಲಿ ಪ್ರಚೋದನಾಕಾರಿ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ನಾಗರಿಕರ ಹಿತ ಕಾಪಾಡುವುದು ಮತ್ತು ಶಾಂತಿ ಸುವ್ಯವಸ್ಥೆ ಪಾಲನೆಯು ಪ್ರತಿಯೊಬ್ಬರ ಜವಾಬ್ದಾರಿ. ಸಣ್ಣಪುಟ್ಟ ಅಹಿತಕರ ಘಟನೆ ನಡೆದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇಲಾಖೆಗೆ ವಿಷಯ ತಿಳಿಸದೆ ಸಮುದಾಯದವರೇ ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನ ಮಾಡಿದರೆ ಸನ್ನಿವೇಶ ವಿಕೋಪಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಅವಕಾಶ ಕೊಡಬಾರದು. ಇಲಾಖೆ ಸದಾ ನಿಮ್ಮೊಂದಿಗೆ ಇದೆ. ಯಾವುದೇ ಸಮಸ್ಯೆಗಳಿದ್ದರೂ ಗಮನಕ್ಕೆ ತನ್ನಿ ಕ್ರಮ ಕೈಗೊಳ್ಳಲಾಗುವುದು. ಮುಸ್ಲಿಂ ಬಾಂಧವರು ಹಬ್ಬ ಆಚರಿಸುವುದರಿಂದ ಸೂಕ್ತ ಬಂದೋಬಸ್ತ್ ನೀಡಲಾಗುವುದು ಎಂದರು.
ಎ.ಎ. ನವಲಗುಂದ ಮಾತನಾಡಿ, ಎಲ್ಲಾ ಧರ್ಮಗಳ ಮೂಲ ಉದ್ದೇಶ ಒಂದೆಯಾಗಿದ್ದು, ಸಹೋದರತೆಯಿಂದ ಕೊಡಿಕೊಂಡು ಸಮಾಜದಲ್ಲಿ ಎಲ್ಲ ಹಬ್ಬಗಳನ್ನು ಆಚರಣೆ ಮಾಡಿದಾಗ ಅದಕ್ಕೆ ಅರ್ಥ ಬರುತ್ತದೆ. ನರೇಗಲ್ಲ ಪಟ್ಟಣದ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವುದೆ ಕೋಮು ಗಲಭೆಗಳು ನಡೆದಿಲ್ಲ. ಇಲ್ಲಿನ ಸರ್ವಧರ್ಮರು ಬಹಳಷ್ಟು ಅನ್ಯೂನ್ಯವಾಗಿ ಜೀವನವನ್ನು ಸಾಗಿಸುತ್ತಾ ಬಂದಿದ್ದೇವೆ. ಫಲವಾಗಿ ಪಟ್ಟಣವು ಕೋಮುಸೌಹಾರ್ದತೆಗೆ ಹೆಸರುವಾಸಿಯಾಗಿದೆ ಎಂದರು.ಮಾಜಿ ಸೈನಿಕ ರಾಮಣ್ಣ ಸಕ್ರೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಮೇಶ ತೊಂಡಿಹಾಳ, ಯಲ್ಲಪ್ಪ ಮಣ್ಣೊಡ್ಡರ, ಸಂತೋಷ ಮಣ್ಣೊಡ್ಡರ, ಹನಮಂತ ಚಳ್ಳಮರದ, ಸಕ್ರಪ್ಪ ಹಡಪದ, ರಾಜೇಶ ಅಂಗಡಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿ.ಡಿ. ಪಾಟೀಲ ನಿರೂಪಿಸಿದರು. ಎನ್.ಎಸ್. ಮಂಗಳೂರ ವಂದಿಸಿದರು.

loading...