ಶಾರ್ಟಸರ್ಕಿಟನಿಂದ ಸುಟ್ಟುಭಸ್ಮವಾದ ಅಂಗಡಿ: ಲಕ್ಷಾಂತರ ಮೊತ್ತದ ಆಸ್ತಿ ಹಾನಿ

0
4
loading...

ಕನ್ನಡಮ್ಮ ಸುದ್ದಿ-ಮಹಾಲಿಂಗಪೂರ: ಪಟ್ಟಣದ ಮುಧೋಳ ರಸ್ತೆಯಲ್ಲಿರುವ ವಿನಾಯಕ ಪ್ಲೆöÊವುಡ್ ಅಂಗಡಿಯಲ್ಲಿ ಸೋಮವಾರ ನಸುಕಿನ ಜಾವ ಶಾರ್ಟಸರ್ಕಿಟನಿಂದಾಗಿ ಬೆಂಕಿ ಹೊತ್ತಿಕೊಂಡಿತು. ಇದರಿಂದಾಗಿ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಟ್ಟಿಗೆ ಸಾಮಾನು ಸೇರಿದಂತೆ ಕಟ್ಟಡಕ್ಕೆ ಬಳಸುವ ಸಾಮಗ್ರಿಗಳು ಸುಟ್ಟು ಭಸ್ಮವಾದವು. ಬೆಂಕಿ ಹತ್ತಿ ಉರಿಯುವ ಸಂದರ್ಭದಲ್ಲಿ ಅಗ್ನಿಶ್ಯಾಮಕ ದಳದವರು ಆಗಮಿಸಿ, ಬೆಂಕಿ ನಂದಿಸಿದರು. ಸ್ಥಳಕ್ಕೆ ಪಿಎಸೈ ರವಿಕುಮಾರ ಧರ್ಮಟ್ಟಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದರು. ಘಟನೆಯು ಮಹಾಲಿಂಗಪೂರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

loading...