ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ: ಅಪಾರ ಹಾನಿ

0
6
loading...

ಮುದ್ದೆÃಬಿಹಾಳ: ತಾಲ್ಲೂಕಿನ ಮುದ್ನಾಳ ಕೆರೆ ತಾಂಡಾದಲ್ಲಿ ದಿ.೨೩ ರಂದು ಗುರುವಾರ ಬೆಳ್ಳಿಗೆ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿತಗುಲಿ ಒಂದು ಲಕ್ಷ ಹತ್ತು ಸಾವಿರ ನಗದು, ೫೦ಗ್ರಾಂ ಚಿನ್ನಾಭರಣ ಸೇರಿದಂತೆ ಮನೆಯಲ್ಲಿರುವ ಬೆಲೆಬಾಳುವ ವಸ್ತು ದಿನಚರಿಯ ಗೃಹೋಪಯೋಗಿ ವಸ್ತುಗಳು ಬಟ್ಟೆ ಸುಟ್ಟು ಭಸ್ಮವಾಗಿವೆ.
ರುಕ್ಮಾಬಾಯಿ ಶೇಖಪ್ಪ ಲಮಾಣಿ ಅವರಿಗೆ ಸೇರಿದ ಮನೆಯಾಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ ತುಂಬಾ ನೋವುವಿನಿಂದ ಮನನೊಂದಿದ್ದಾರೆ. ಈ ದಿನ ಬೆಳಗಿನಜಾವ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿಹತ್ತಿಕೊಂಡಿದ್ದು ಅಕ್ಕಪಕ್ಕದ ನಿವಾಸಿಗಳು ನೋಡಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ನಂತರ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಬೆಂಕಿನಂದಿಸು ವಷ್ಟರಲ್ಲಿ ಎಲ್ಲ ಕಡೆ ಬೆಂಕಿ ಆವರಿಸಿಕೊಂಡು ಪೂರ್ತಿ ಮನೆ ಸುಟ್ಟು ಕರಕಲಾಗಿದೆ, ಮನೆಯಲ್ಲಿದ ಫ್ರಿÃಜ್, ಟಿವ್ಹಿ, ದವಸಧಾನ್ಯಗಳು ಕೂಡಾ ಸುಟ್ಟು ಭಸ್ಮವಾಗಿವೆ.

ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಹರಶತ ಅಂಬೆಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಹಡಲಗೇರಿ ಗ್ರಾ.ಪಂ ಅಧ್ಯಕ್ಷ ಹಣಮಂತ ತಳ್ಳಿಕೇರಿ ಭೇಟಿ ನೀಡಿದ್ದಾರೆ, ಮುದ್ದೆÃಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

loading...