ಶಾಸಕಿ ಹೆಬ್ಬಾಳಕರ್ ಜಾತಿ ಹೆಸರಿನಲ್ಲಿ ಶಾಂತಿ ಕದಡುತ್ತಿದ್ದಾರೆ:ವಾಲ್ಮೀಕಿ ಯುವ ವೇದಿಕೆ ಆರೋಪ

0
179
loading...

ಶಾಸಕಿ ಹೆಬ್ಬಾಳಕರ್ ಜಾತಿ ಹೆಸರಿನಲ್ಲಿ ಶಾಂತಿ ಕದಡುತ್ತಿದ್ದಾರೆ:ವಾಲ್ಮೀಕಿ ಯುವ ವೇದಿಕೆ ಆರೋಪ

ಕನ್ನಡಮ್ಮ ಸುದ್ದಿ- ಬೆಳಗಾವಿ: ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿ ಜಾತಿ ಜಾತಿ ನಡುವೆ‌ ವಿಷ ಬೀಜ ಬಿತ್ತುವ‌ ಕೆಲಸ ಮಾಡುತ್ತಿದ್ದಾರೆ,ಅವರ ವಿರುದ್ಧ ಕ್ರಮ ಕೈಗೊಳ್ಳಬೆಕೆಂದು ಆಗ್ರಹಿಸಿ ಕರ್ನಾಟಕದ ವಾಲ್ಮೀಕಿ ಯುವ‌ ವೇದಿಕೆ ವತಿಯಿಂದ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಎರಡು ದಿನಗಳ ಹಿಂದೆ ತಹಶಿಲ್ದಾರ ಕಚೇರಿ ಎದುರು ಪಿಎಲ್ ಡಿ ಬ್ಯಾಂಕ್ ಚುನಾವಣೆ ಮುಂದುಡಿದ್ದಕೆ ಅಹೋ ರಾತ್ರಿ ಪ್ರತಿಭಟನೆ ನಡೆಸಿ, ಅವಹೇಳನಾ ಕಾರಿ ಹೇಳಿಕೆ ನೀಡಿದ್ದ
ಲಿಂಗಾಯತ ಸಮುದಾಯದ ಜಾತಿಯಲ್ಲಿ ನಾನು ಬೆಳೆಯುವುದು ಕೆಲವರಿಗೆ ಸಹಿಸಲಾಗುತ್ತಿಲ್ಲ ಎಂಬ ಹೇಳಿಕೆ‌ ನೀಡಿದ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು .

loading...