ಶಾಸಕ ಬಿ.ಶ್ರೀರಾಮುಲು ವಿರುದ್ಧ ದೂರು ದಾಖಲು

0
8
loading...

ಬೆಂಗಳೂರು:ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡುವ ಕುರಿತು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಶಾಸಕ ಬಿ.ಶ್ರೀರಾಮುಲು ವಿರುದ್ಧ ಕನ್ನಡ ಅನುಷ್ಠಾನ ಮಂಡಳಿ ಅಧ್ಯಕ್ಷ ಆರ್.ಎ.ಪ್ರಸಾದ್ ಮಲ್ಲೇಶ್ವರಂ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜುಲೈ 27ರಂದು ಬಳ್ಳಾರಿಯ ವೇದಿಕೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶ್ರೀರಾಮುಲು,ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣದ ಮಾದರಿಯಲ್ಲಿ ಹೋರಾಟ ಆರಂಭಿಸಬೇಕು. ಇದಕ್ಕಾಗಿ ಆಗಸ್ಟ್ 2ರಂದು ಪ್ರತ್ಯೇಕ ಉತ್ತರ ಕರ್ನಾಟಕ ಬಂದ್‍ಗೆ ಕೂಡಾ ಕರೆ ನೀಡಿದ್ದಾರೆ.
ಬಿ.ಶ್ರೀರಾಮುಲು ಅವರು ಅಧಿಕಾರಯುಕ್ತ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಈ ರೀತಿ ಮಾತನಾಡಿರೋದು ತಪ್ಪು ಎಂದು ಕರ್ನಾಟಕ ರಾಜ್ಯ ಪುನರ್ ವಿಂಗಡಣೆ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಅಖಂಡ ಕರ್ನಾಟಕದ ಏಕತೆಗೆ ಧಕ್ಕೆ ತರುವ ಹೇಳಿಕೆ ನೀಡಿದ ಶ್ರೀರಾಮುಲು ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಸಾದ್ ಆಗ್ರಹಿಸಿದ್ದಾರೆ.

loading...