ಶಿಥಿಲಾವಸ್ಥೆಯಲ್ಲಿ ಶಾಲಾ‌ ಕಾಲೇಜು ಕಟ್ಟಡ: ಪುನರ್ ನಿರ್ಮಾಣ ಎಬಿವಿಪಿ‌ ಆಗ್ರಹ

0
7
  1. ಶಿಥಿಲಾವಸ್ಥೆಯಲ್ಲಿ ಶಾಲಾ‌ ಕಾಲೇಜು ಕಟ್ಟಡ: ಪುನರ್ ನಿರ್ಮಾಣ ಎಬಿವಿಪಿ‌ ಆಗ್ರಹ
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ‌ ಕಾಲೇಜು ಕಟ್ಟಡಗಳನ್ನು ಪುನರ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿಅಖಿಲ ಭಾರತಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.

ನಗರದಲ್ಲಿರುವ ಪ್ರತಿಷ್ಠಿತ ಸರ್ಕಾರಿ ಶಿಕ್ಷಣ ಸಂಸ್ಥೆಗಳಾದ
ಸರಸ್ವತಿ ಪ.ಪೂ.ಕಾಲೇಜ್ ಸರ್ಜಾರಿ ಡಿಪ್ಲೊಮಾ ಹಾಗೂ ಸರ್ಕಾರಿ ಬಿ ಎಡ್‌ ಕಾಲೇಜ್ ಸಂಪೂರ್ಣ ಶಿಥಿಲಾವಸ್ಥೆಯಲ್ಲಿ ವಿದ್ಯಾರ್ಥಿಗಳು ಭಯದಲ್ಲಿ ಪಾಠ ಕೇಳುವ‌ ಪರಿಸ್ಥಿತಿ ಬಂದೊದಗಿದೆ.ಅಲ್ಲದೆ ಕಾಲೇಜ್ ಶಿಥಿಲಾವಸ್ಥೆ ಇರುವ ಕಾರಣದಿಂದ ಕಾಲೇಜ್‌ ನಲ್ಲಿ‌ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ‌ ದಿನಕ್ಕೆ‌ ಕುಂಟಿತವಾಗುತ್ತಿದೆ.ಇಲ್ಲಿ‌ ಬಡಕುಟುಂಬದ‌ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಜನಪ್ರತಿನಿಧಿಗಳ ಶಿಥಿಲಾವಸ್ಥೆಯಲ್ಲಿರುವ‌ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಬಿವಿಪಿಯ ಮಹಾನಗರ ಕಾರ್ಯದರ್ಶಿ ರೋಹಿತ್ ಉಮನಾದಿಮಠ, ಸದಸ್ಯರು,ಸರಸ್ವತಿ ಪ.ಪೂ.ಕಾಲೇಜ್ ಸರ್ಜಾರಿ ಡಿಪ್ಲೊಮಾ ಹಾಗೂ ಸರ್ಕಾರಿ ಬಿ ಎಡ್‌ ಕಾಲೇಜ್ ವಿದ್ಯಾರ್ಥಿಗಳು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು

loading...