ಶಿಶುನಾಳ ಶರೀಪರ ತತ್ವದರ್ಶನ

0
6
loading...

 

ಮುದ್ದೆÃಬಿಹಾಳ: ವಚನ ಸಾಹಿತ್ಯದ ಮೂಲಕ ಸಕಲರಿಗೂ ಅರ್ಥವಾಗುವಂತೆ ಆಡುಭಾಷೆಯಲ್ಲಿ ಹಾಡಿದವರು ಕರ್ನಾಟಕದ ಕಬೀರರೆಂದು ಖ್ಯಾತರಾದ ಸಂತ ಶಿಶುನಾಳ ಶರೀಫರರು ಮುಸಲ್ಮಾನರಾಗಿ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಕ್ರಿ.ಶ. ೧೮೧೯ ಮಾರ್ಚ ೭ ರಂದು ಜನಿಸಿದರು. ಇವರು ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಜ್ಜೂಮಾ ಎಂಬ ಊಧರದಿಂದ ಜನ್ಮತಾಳಿದ ಮಹಾನ ವ್ಯಕ್ತಿ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ, ಇವರು ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಶಿಶುನಾಳ ಗ್ರಾಮದ ಸಮೀಪದ ಹಳ್ಳಿಯೋದರಲ್ಲಿ ಶಿಕ್ಷಕರಾಗಿ ಕೆಲಕಾಲ ಸೇವೆ ಸಲ್ಲಿಸುತ್ತ ತಮ್ಮಲ್ಲಿರುವ ಪ್ರತಿಭೆಯನ್ನು ಮಕ್ಕಳಿಗೂ ಮತ್ತು ಗ್ರಾಮದ ಜನತೆಗೂ ತೋರಿಸಿಕೊಟ್ಟರು. ಸರ್ವ ಮಾನವ ಜನಾಂಗ ಒಂದು ಅದು ಪರಮಾತ್ಮನ ಇಚ್ಛೆ ಆದ್ದರಿಂದ ಅವನ ಇಚ್ಚೆಯಂತೆ ನಾವೆಲ್ಲರೂ ಬದುಕುತ್ತಿದ್ದೆÃವೆ. ಬದುಕಿದಾಗಲೇ ನಮ್ಮ ಬದುಕನ್ನ ಸಚ್ಛಾರಿತ್ರö್ಯದಿಂದ ಶ್ರಿÃಮಂತಗೊಳಿಸಬೇಕು ಎಂದು ಅರ್ಥಪೂರ್ಣ ಸಂದೇಶವನ್ನು ಬಾಲತಪಸ್ವಿ ಸೋಮಲಿಂಗ ಮಹಾರಾಜರು ಹೇಳಿದರು.
ಉತ್ನಾಳ ತಾಂಡಾದ ಶಂಕರಲಿಂಗ ಗುರುಪೀಠದ ಶಾಖಾಮಠದಲ್ಲಿ ಶಂಕರಲಿಂಗೇಶ್ವರ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ನಿಮಿತ್ಯ ನಡೆಯುತ್ತಿರುವ ಸಂತ ಶಿಶುನಾಳ ಶರೀಫರ ತತ್ವ ದರ್ಶನದ ಐದನೇಯ ದಿನದ ಪ್ರವಚನದಲ್ಲಿ ನಡೆದ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು. ಸಂತ ಶರೀಫರು ಹಾಡಿದ ಹಾಡುಗಳು ಧಾರವಾಡಾ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸುತ್ತಿಯ ಪದಗಳಾದರೆ, ಇನ್ನು ಕೆಲವು ಹಾಡುಗಳು ತತ್ವಬೋಧನೆಯ ಪದಗಳಾಗಿವೆ.

ಇದೇ ಸಂದರ್ಭದಲ್ಲಿ ಬಾಲತಪಸ್ವಿ ಸೋಮಲಿಂಗ ಮಹಾರಾಜರ ಜನ್ಮದಿನೋತ್ಸವನ್ನು ಆಚರಿಸಿದರು, ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಮಹಾದೇವ ಹುಲ್ಲೂರ ಮಾತನಾಡಿ ನಮ್ಮ ಈ ಬಾಲತಪಸ್ವಿ ಸೋಮಲಿಂಗ ಮಹಾರಾಜರು ಮಾಡುತ್ತಿರುವ ಕಾರ್ಯಗಳನ್ನು ನೋಡಿದರೆ ಸಮಾದ ಬೆಳವಣಿಗೆ ಇವರ ತತ್ವ ಸಿದ್ದಾಂತಗಳಿಂದ ಮುನ್ನಡೆಯುತ್ತಿದೆ, ಸಮಾಜದಲ್ಲಿ ನಡೆಯುತ್ತಿರುವ ಕೆಟ್ಟದ್ದು, ಒಳ್ಳೆಯದನ್ನು ಅರಿತು ಎಲ್ಲವನ್ನು ಸಮಾಂತರವಾಗಿ ತಿಳಿದುಕೊಂಡು ತಮ್ಮ ಈ ಪ್ರವಚನದ ತತ್ವ ನುಡಿಗಳಲ್ಲಿ ಸಾರ್ವಜನಿಕರಿಗೆ ಒಳ್ಳೆÃಯ ದಾರಿ ದೀಪ ತೋರುತ್ತಿರುವ ಒಂದು ಮಹಾನ ಪೂಜ್ಯರು ಇವರು ಶ್ರಿÃಗಳು ಬಂಜಾರ ಸಮುದಾಯದಲ್ಲಿ ಹುಟ್ಟಿ ಬೆಳೆದು ಸಮಾಜಕ್ಕಾಗಿ ಸೇವೆ ಸಲ್ಲಿಸುವದನ್ನು ದೂರವಿಟ್ಟು ಎಲ್ಲ ಸಮಾಜವನ್ನು ಸಮಾಂತರದಿಂದ ಕಾಣಿ ನಮ್ಮವರು ಎಂದು ಭಾವಿಸಿದನ್ನು ನೋಡಿದರೆ ಇಂತಹ ಮಹಾನ ಪೂಜ್ಯರು ನಮಗೆ ದೊರಕಿದು ಒಂದು ದೊಡ್ಡ ಕೋಡುಗೆ ಎಂದು ಹೇಳಿದರು ಅವರ ನಡೆ ನುಡಿಗಳನ್ನು ಕಂಡು ನಾವು ನೀವು ಎಲ್ಲರೂ ಮುಂದೆ ಸಾಗೋಣ ಎಂದು ಹೇಳಿದರು.

loading...