ಶಿಷ್ಟಾಚಾರದ ಶಿಕ್ಷಣವೇ ಸಂಸ್ಕಾರ: ಸಾಹುಕಾರ

0
3
ಬೀಳಗಿ: ತಂದೆ-ತಾಯಿಗಳಿಂದ ಮಕ್ಕಳಿಗೆ ನೀಡುವ, ಕಲಿಸುವ, ವಿನಿಮಯ ಮಾಡುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಭ್ಯತೆಯ ಶಿಷ್ಟಾಚಾರದ ಶಿಕ್ಷಣವೇ ಸಂಸ್ಕಾರ. ಸಂಸ್ಕಾರವೆಂದರೆ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಮತ್ತು ಕೆಟ್ಟ ಅಭ್ಯಾಸಗಳನ್ನು ತೆಗೆದು ಹಾಕುವುದು ಎಂದರ್ಥವೆಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ನಿರ್ದೇಶಕ ಡಿ. ಎಂ. ಸಾಹುಕಾರ ಹೇಳಿದರು.
ತಾಲೂಕಿನ ಅರಕೇರಿ ಗ್ರಾಮದಲ್ಲಿ ಶ್ರಿÃಕ್ಷೆÃತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹಸ್ತಾಂತರಿಸುವ ಪ್ರಕ್ರಿಯೆಯೇ ಸಂಸ್ಕಾರ ಎಂದು ತಿಳಿಸಿದರು.

loading...

ತಂದೆ-ತಾಯಿಗಳು ಮಕ್ಕಳ ಮುಂದೆ ದುಶ್ಚಟಗಳನ್ನು ಮಾಡುವುದು, ಅಶ್ಲಿÃಲ ಬೈಗುಳಗಳ ಪ್ರಯೋಗ ಮಾಡಬೇಡಿರಿ. ಏಕೆಂದರೆ ಮಹಿಳೆಯರು ಸಂಸ್ಕಾರ, ಸಂಸ್ಕೃತಿಯ ರಾಯಭಾರಿಗಳು. ಮಕ್ಕಳು ತಪ್ಪಿದಾಗ ಏಟು ಕೊಟ್ಟು ಸರಿ ದಾರಿಗೆ ತರಬೇಕು. ಅಲ್ಲದೆ ಮಕ್ಕಳಿಗೆ ಬೈದು ಬುದ್ಧಿ ಹೇಳಲು ನೈತಿಕತೆ ಇಟ್ಟುಕೊಳ್ಳಬೇಕಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕಿ ಯಶೋಧಾ ತೊಂಡಿಕಟ್ಟಿ ಮಾತನಾಡಿ, ನಗರೀಕರಣದಲ್ಲಿ ವ್ಯವಸ್ಥೆಯಲ್ಲಿ ಸಂಸ್ಕಾರ ಕಲಿಸುವದನ್ನು ಮರೆತು ಬಿಟ್ಟಿದ್ದೆÃವೆ. ದೇಶದಲ್ಲಿ ಮಹಿಳೆಯರಿಗೆ ಮಹತ್ತರವಾದ ಸ್ಥಾನ ಇದೆ. ಆ ಸ್ಥಾನವನ್ನು ಉಳಿಸಿಕೊಂಡು ಹೋಗಬೇಕಾದ ಹೊಣೆ ಪ್ರತಿ ಮಹಿಳೆಯರ ಮೇಲಿದೆ ಎಂದು ಹೇಳಿದರು.

ಅತಿಥಿಗಳಾಗಿ ಮೇಲ್ವಿಚಾರಕಿ ರಾಜೇಶ್ವರಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜಯಶ್ರಿÃ, ಜಿಲ್ಲಾ ಸಮನ್ವಯಾಧಿಕಾರಿ (ಎನ್‌ಆರ್‌ಎಲ್‌ಎಂ) ರಮೇಶ, ಗ್ರಾಪಂ ಸದಸ್ಯೆ ಈರವ್ವ ಜಗದಾಳ, ಒಕ್ಕೂಟದ ಅಧ್ಯಕ್ಷ ರಮೇಶ ಬಳಿಗಾರ, ಉಪಾಧ್ಯಕ್ಷ ಚಂದ್ರಕಾಂತ ಬೂತಡಾ, ಕೋಶಾಧಿಕಾರಿ ಹೊಳಿಯಪ್ಪ ಕಮ್ಮನ್ನವರ, ಸೇವಾ ಪ್ರತಿನಿಧಿಗಳಾದ ಉಮಾ ಹಿರೇಮಠ, ಶೈಲಾ ಬಿರಾದಾರ ಉಪಸ್ಥಿತರಿದ್ದರು.

loading...