ಸಂತಿ ಬಸ್ತವಾಡದ ಸಾರಾಯಿ ಅಂಗಡಿಗೆ ಬಂದ್ ಮಾಡುವಂತೆ ಆಗ್ರಹ

0
6
loading...

ಸಂತಿ ಬಸ್ತವಾಡದ ಸಾರಾಯಿ ಅಂಗಡಿಗೆ ಬಂದ್ ಮಾಡುವಂತೆ ಆಗ್ರಹ

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಂತಿ ಬಸ್ತವಾಡ ಗ್ರಾಮದಲ್ಲಿ ಎಂಎಸ್‌ಐಎಲ್ ಸಾರಾಯಿ ಅಂಗಡಿ ಬಂದ್ ಮಾಡುವಂತೆ ಆಗ್ರಹಿಸಿ ಗ್ರಾಮದ ಮಹಿಳೆಯರು ಸೇರಿದಂತೆ ನೂರಾರು ಜನರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು ಮನವಿಯಲ್ಲಿ ಸಂತಿ ಬಸ್ತವಾಡ ಗ್ರಾಮದಲ್ಲಿ ಆರಂಭಿಸಿರು ಎಂಎಸ್‌ಐಎಲ್ ಸಾರಾಯಿ ಅಂಗಡಿಯನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.ಸಂತಿ ಬಸ್ತವಾಡ ಗ್ರಾಮದ ಬಸ್ ನಿಲ್ದಾಣದ ಹತ್ತಿರಿ ಈ ಸಾರಾಯಿ ಅಂಗಡಿ ಆರಂಭಿಸಿದ್ದಾರೆ.ಆದ್ದರಿಂದ ಈ ಸರಾಯಿ ಅಂಗಡಿಯನ್ನು ಬಂದ್ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಗ್ರಾಮದ ಪ್ರಸಾದ ಸಾಡೆಕರ್,ಶಂಕರ ಚನ್ನಗೊಪ್ಪ,ರಾಮಾ ಪಾಟೀಲ ಸೇರಿದಂತೆ ಇತರರು ಇದ್ದರು.

loading...