ಸಂತ್ರಸ್ತರ ನೆರವಿಗೆ 12.31 ಕೋಟಿ ರೂ.ಹಣ ದೇಣಿಗೆ

0
5
loading...

ಬೆಂಗಳೂರು:ಕೊಡಗು ಸಂತ್ರಸ್ತರ ನೆರವಿಗೆ ಮುಜರಾಯಿ ಇಲಾಖೆ ಮುಂದಾಗಿದ್ದು,ಒಟ್ಟು 12 ಕೋಟಿ 31 ಲಕ್ಷ ರೂ.ಹಣವನ್ನು ದೇಣಿಗೆ ನೀಡಲು ನಿರ್ಧಾರ ಮಾಡಿದೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣವನ್ನು ಕೂಡಲೇ ಜಮಾ ಮಾಡುವಂತೆ ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿ ಗಳಿಗೆ ಮುಜರಾಯಿ ಇಲಾಖೆ ಸಚಿವ ರಾಜಶೇಖರ್ ಪಾಟೀಲ್ ಸೂಚನೆ ನೀಡಿದ್ದಾರೆ.
ರಾಜ್ಯದ ಪ್ರಮುಖ ದೇವಾಲಯಗಳಾದ ಕುಕ್ಕೆ ಸುಬ್ರಮಣ್ಯ ದೇವಸ್ಥಾನ 3 ಕೋಟಿ ರೂ. ನಂಜನಗೂಡು ಚಾಮುಂಡೇಶ್ವರಿ ದೇವಸ್ಥಾನ ಮತ್ತು ಉಡುಪಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ತಲಾ 1ಕೋಟಿ ರೂ. ಕಟೀಲು ದುರ್ಗಾಪರಮೇಶ್ವರಿ 75 ಲಕ್ಷ ರೂ. ಬೆಂಗಳೂರಿನ ಬನಶಂಕರಿ, ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯ ಸ್ವಾಮಿ, ಸವದತ್ತಿ ಯಲ್ಲಮ್ಮ, ಕೊಪ್ಪಳ ಹುಲಿಗೆಮ್ಮ, ಮಂದಾರ್ತಿ ತಲಾ 50 ಲಕ್ಷ ರೂ.ನೀಡಬೇಕು ಎಂದು ಸೂಚಿಸಲಾಗಿದೆ.

loading...