ಸಂಭ್ರಮದ ನಾಗರ ಪಂಚಮಿ ಆಚರಣೆ

0
7
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ನಾಗರ ಪಂಚಮಿ ಪ್ರಯುಕ್ತ ಪಟ್ಟಣದ ಜನತೆ ಮಂಗಳವಾರ ಸಡಗರ ಹಾಗೂ ಸಂಭ್ರಮದಿಂದ ನಾಗರಮೂರ್ತಿಗೆ ಮತ್ತು ಹುತ್ತಕ್ಕೆ ಹಾಲೆರೆದು ಸಂತಸದಿಂದ ಪಂಚಮಿ ಹಬ್ಬ ಆಚರಿಸಿದರು. ಸ್ಥಳೀಯ ಕೋಟೆ ಆಂಜನೇಯನ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಅಂಬಾ ಭವಾನಿ ದೇವಸ್ಥಾನ, ಕನ್ನಿಕಾಪರಮೇಶ್ವರಿ ದೇವಸ್ಥಾನ ಮೊದಲಾದ ದೇವಸ್ಥಾನಗಳಲ್ಲಿರುವ ನಾಗರ ಮೂರ್ತಿಗಳಿಗೆ ಭಕ್ತರು ಶ್ರದ್ಧೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಕೆಲವು ದೇವಾಲಯಗಳಲ್ಲಿ ಮಹಿಳೆಯರು ಸರದಿಯಲ್ಲಿ ನಿಂತು ಪೂಜೆ ಸಲ್ಲಿಸಿದರು. ಮಹಿಳೆಯರು ಭತ್ತದ ಸಸಿ, ಅರಿಷಿಣ ಮತ್ತು ಕುಂಕುಮಗಳಿಂದ ತಯಾರಿಸಿದ ಹಂಗಿನ ನೂಲು ಮೊದಲಾದವುಗಳಿಂದ ನಾಗಮೂರ್ತಿಗೆ ಹಾಕಿ ವಿಶೇಷ ಅಲಂಕಾರ ಮಾಡಿದರು. ಕುಟುಂಬದ ಸದಸ್ಯರೆಲ್ಲ ಸೇರಿ ಕುಟುಂಬದ ಹಿರಿಯರ ಸರ್ವರ ಹೆಸರಿನಲ್ಲಿ ನಾಗಪ್ಪನಿಗೆ ಹಾಲೆರೆದರು.
ಪಟ್ಟಣದ ಕೆಲವು ಭಾಗಗಳಲ್ಲಿ ಭಕ್ತರು ಪಟ್ಟಣದ ಹೊರವಲಯದಲ್ಲಿರುವ ನಾಗರ ಹುತ್ತಗಳಿಗೆ ತೆರಳಿ ಹುತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿ ಮನೆ ಮಂದಿಯೆಲ್ಲ ಸಂತಸದಿಂದ ಹುತ್ತಕ್ಕೆ ಹಾಲೆರೆದರು.

loading...