ಸಂವಿಧಾನ ಸುಟ್ಟವರನ್ನು ಗಡಿಪಾರು ಮಾಡಿ: ದಲಿತ ಸಂಘಟನೆಗಳ ಒತ್ತಾಯ

0
4
loading...

ಇಂಡಿ: ಇತ್ತಿಚಿಗೆ ಅ.೯ ರಂದು ದೆಹಲಿಯ ಜಂತರ-ಮಂತರದಲ್ಲಿ ಭಾರತದ ಸಂವಿಧಾನವನ್ನು ಸುಟ್ಟು ಹಾಕಿದ್ದು ಆ ದೇಶದ್ರೊÃಹಿಯನ್ನು ಕೂಡಲೇ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಗಡಿಪಾರು ಮಾಡುವಂತೆ ತಾಲೂಕಿನ ದಲಿತ ಸಂಘಟನೆಗಳು ಒತ್ತಾಯಿಸಿ ಸೋಮವಾರ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯ ನೇತೃತ್ವವನ್ನು ದಲಿತ ಸಂಘಟನೆಯ ಮುಖಂಡರಾದ ಭೀಮಾಶಂಕರ ಮೂರಮನ ಹಾಗೂ ಕಲ್ಲು ಅಂಜುಟಗಿ ಮಾತನಾಡಿ ಇತ್ತಿಚಿಗೆ ದೇಹಲಿಯ ಜಂತರ ಮಂತರದಲ್ಲಿ ಯಾವನೋ ಒಬ್ಬ ದೇಶದ್ರೊÃಹಿ ಡಾ. ಬಿ.ಆರ್. ಅಂಬೇಡ್ಕರವರು ಬರೆದ ಪವಿತ್ರವಾದ ಭಾರತದ ಸಂವಿಧಾನವನ್ನು ಸುಟ್ಟು ಹಾಕಿದ್ದು ಈ ಘಟನೆಯು ರಾಷ್ಟç ರಾಜಧಾನಿಯಲ್ಲಿ ನಡೆದಿದೆ. ಆದರೆ ಅಲ್ಲೆÃ ಇರುವ ಕೇಂದ್ರ ಸರಕಾರದ ಯಾವುದೇ ಮಂತ್ರಿಗಳು ಇದರ ಬಗ್ಗೆ ಪ್ರಕ್ರಿÃಯೆ ನಡೆದಿಲ್ಲ. ಇಂತಹ ದೇಶದ್ರೊÃಹ ಕೃತ್ಯದಲ್ಲಿ ಅನೇಕ ಸಂಘಟನೆಗಳು ಭಾಗಿಯಾಗಿದ್ದನ್ನು ಸ್ಪಷ್ಟತೆಯನ್ನು ಎದ್ದು ಕಾಣುತ್ತಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರವರನ್ನು ನಿಂದಿಸುತ್ತಾ ಸಂವಿದಾನ ಮುರ್ದಾಬಾದ ಅಂಬೇಡ್ಕರ್ ಮುರ್ದಾಬಾದ ಎಂಬ ಘೋಷಣೆ ಕೂಗುತ್ತಾರೆ. ಇವರ ಮುಖ್ಯ ಉದ್ದೆÃಶ ಕೋಮು ಭಾವನೆಯನ್ನು ಕೆರಳಿಸುವುದು ಈ ಮೂಲಕ ಅಶಾಂತಿ ಮೂಡಿಸುವುದಾಗಿದೆ. ಜಾತಿ-ಜಾತಿಗಳ ಮಧ್ಯ, ಧರ್ಮ-ಧರ್ಮಗಳ ಮಧ್ಯ ಕಂದಕ ತರುವ ಮೂಲಕ ನಾಗರಿಕರಲ್ಲಿ ಕೆಟ್ಟ ವಾತಾವರಣವನ್ನು ಸೃಷ್ಠಿ ಮಾಡುವ ವಿಕೃತ ಮನಸ್ಸನ್ನು ಹೊಂದಿದ್ದಾರೆ. ಭಾರತ ದೇಶದ ೧೨೦ ಕೋಟಿಗೂ ಹೆಚ್ಚಿನ ನಾಗರಿಕರು ಗೌರವಿಸುವ ಸಂವಿಧಾನವನ್ನು ಸುಡುವ ಮಟ್ಟಿಗೆ ಈ ಸಂಘಟನೆಗಳು ತೊಡಗಿವೆ. ಪ್ರಜಾಪ್ರಭುತ್ವ, ಜ್ಯಾತ್ಯಾತೀತ, ಏಕತಾ ಮಂತ್ರದಲ್ಲಿ ನಂಬಿಕೆ ಇಟ್ಟಿರುವ ಬಹುಜನರ ಮನಸ್ಸಿಗೆ ಘಾಸಿಯಾಗಿದೆ, ಹೀಗಾಗಿ ದೇಶದ್ರೊÃಹಿ ಕೃತ್ಯದಲ್ಲಿ ತೊಡಗಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಅವರು ಯಾವುದೇ ಸಂಘಟನೆಗೆ ಸೇರಿದ್ದರು. ಆ ಸಂಘಟನೆಯ ಮೇಲೆ ದೇಶದ್ರೊÃಹಿ ಕಾಯ್ದೆ ಅನ್ವಯ ಕ್ರಮ ಕೈಕೊಳ್ಳಬೇಕು ಮತ್ತು ಅವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಹಿಸುತ್ತದೆ.

ಮನವಿ ಪತ್ರವನ್ನು ದಲಿತ ಸಂಘಟನೆಯ ಮುಖಂಡರಾದ ಭೀಮಾಶಾಂಕರ ಮೂರಮನ ಅವರು ಎಸಿಪಿ. ರಾಜ ಅವರಿಗೆ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ತಾಲೂಕಿನ ದಲಿತ ಸಂಘಟನೆಯ ಎಲ್ಲ ಕಾರ್ಯಕರ್ತರು ಪಾಲ್ಗೊಂಡಿದ್ದರು.

loading...