ಸಚಿವ ರಮೇಶ ಜಾರಕಿಹೊಳಿಯವರು ಪಕ್ಷ ತೇಗಿಸುವದು ಸುಳ್ಳು ಸುದ್ದಿ: ಗುಂಡುರಾವ್

0
4
loading...

ಸಚಿವ ರಮೇಶ ಜಾರಕಿಹೊಳಿಯವರು ಪಕ್ಷ ತೇಗಿಸುವದು ಸುಳ್ಳು ಸುದ್ದಿ: ಗುಂಡುರಾವ್
ಕನ್ನಡಮ್ಮ ಸುದ್ದಿ- ಘಟಪ್ರಭಾ: ಒಳ್ಳೆಯ ಮಂತ್ರಿ ಸ್ಥಾನವನ್ನು ನೀಡಿ ಕಾಂಗ್ರೆಸ ಪಕ್ಷದಲ್ಲಿ ಪ್ರಮುಖ ಸ್ಥಾನದಲ್ಲಿರುವ ಸಚಿವ ರಮೇಶ ಜಾರಕಿಹೊಳಿಯವರು ಪಕ್ಷ ಬಿಡುತ್ತಾರೆಂದರೆ ನಂಬಲಿಕೆ ಸಾಧ್ಯವಿಲ್ಲ.
ಸರ್ಕಾರವನ್ನು ಅಸ್ಥಿರಗೊಳಿಸಲು ವಿರೋಧ ಪಕ್ಷಗಳು ಎಬ್ಬಿಸಿದ ಇದೊಂದು ವದಂತಿ ಮಾತ್ರ ಇದರಲ್ಲಿ ಯಾವುದೆ ಹುರುಳಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ ಗುಂಡೂರಾವ ಹೇಳಿದರು.
ಅವರು ಇಂದು ಸಂಜೆ ಘಟಪ್ರಭಾದಲ್ಲಿರುವ ಭಾರತ ಸೇವಾದಳ ಸಂಸ್ಥಾಪಕರಾದ ಡಾ.ನಾ.ಸು. ಹರ್ಡೀಕರ ಸಮಾಧಿಗೆ ಆಕಸ್ಮಿಕ ಭೇಟಿದ ಸಂದರ್ಭದಲ್ಲಿ ಸ್ಥಳೀಯ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತ ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷರು ಬಂದಾಗ ಜಿಲ್ಲೆಯಲ್ಲಿರುವ ಪಕ್ಷದÀ ಶಾಸಕರು ಏಕೆ ಬಂದಿಲ್ಲ ಎಂದು ಕೇಳಿದಾಗ ನಾನು ಬಂದಾಗ ಶಾಸಕರು ಬರಲೇ ಬೇಕಂತೇನೂ ಕಡ್ಡಾಯವಿಲ್ಲ. ಅವರು ಬೇರೆ ಕೆಲಸದ ಮೇಲೆ ಹೊರಗಡೆ ಹೋಗಿರಬಹುದೆಂದು ಜಾರಿಕೊಂಡರು. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸುತ್ತದೆ ಸಿದ್ಧರಾಮಯ್ಯಾ ಹೇಳಿರುವುದು ಬೇರೆ ಮಾಧ್ಯಮದಲ್ಲಿ ಬಂದಿರುವುದೇ ಬೇರೆಯಾಗಿದೆ ನಾವು ಯಾವುದೇ ಕಾರಣಕ್ಕೂ ಸರ್ಕಾರವನ್ನು ಬೀಳಿಸಿ ಚುನಾವಣೆಗೆ ಹೋಗುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನಸಭಾ ಸಭಾಪತಿ ವೀರಣ್ಣಾ ಮತ್ತಿಕಟ್ಟಿ, ಲಕ್ಷö್ಮಣರಾವ ಚಿಂಗಳೆ, ವಿನಯ ನಾವಲಗಟ್ಟಿ, ಡಾ.ಘನಶ್ಯಾಮ ವೈದ್ಯ, ಪಿ.ವಿ.ಮೋಹನ, ಪ್ರಕಾಶ ದೇಶಪಾಂಡೆ, ಪಿ.ಎನ್.ಶಿಂದೆ, ಡಾ.ರಾಘವೇಂದ್ರ ಪತ್ತಾರ, ಅಪ್ಪಾಸಾಭ ಮುಲ್ಲಾ ಸೇರಿದಂತೆ ಅನೇಕರು ಇದ್ದರು.

loading...